ಕರ್ನಾಟಕ

karnataka

ETV Bharat / state

ಮೈಸೂರು ದೇವರಾಜ ಮಾರುಕಟ್ಟೆ ವರ್ತಕರಿಗೆ ಕೊರೊನಾ ಟೆಸ್ಟ್ - ಮೈಸೂರು ದೇವರಾಜ ಮಾರುಕಟ್ಟೆಯಲ್ಲಿ ಕೋವಿಡ್ ಪರೀಕ್ಷೆ

ಮೈಸೂರು ದೇವರಾಜ ಮಾರುಕಟ್ಟೆಯ ವರ್ತಕರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ, ಸ್ವಯಂ ಪ್ರೇರಿತರಾಗಿ ಬಂದು ಪರೀಕ್ಷೆಗೆ ಒಳಪಡುತ್ತಿದ್ದಾರೆ.

Corona Test for Mysuru Devaraja Market Trader's
ದೇವರಾಜ ಮಾರುಕಟ್ಟೆ ವರ್ತಕರಿಗೆ ಕೊರೊನಾ ಟೆಸ್ಟ್

By

Published : Oct 6, 2020, 8:44 PM IST

ಮೈಸೂರು : ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ನಗರದ ದೇವರಾಜ ಮಾರುಕಟ್ಟೆಯ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಕೊರೊನಾ ಪರೀಕ್ಷೆ ನಡೆಸುತ್ತಿದೆ.

ದೇವರಾಜ ಮಾರುಕಟ್ಟೆಯ ವರ್ತಕರು ಮತ್ತು ಸುತ್ತ ಮುತ್ತಲ‌ ಬೀದಿ ಬದಿ ವ್ಯಾಪರಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿರುವ ಹಿನ್ನೆಲೆ, ಚಿಕ್ಕ ಗಡಿಯಾರದ ಬಳಿ ತೆರೆದಿರುವ ಪರೀಕ್ಷಾ ಕೇಂದ್ರದತ್ತ ಸ್ವಯಂ ಪ್ರೇರಿತರಾಗಿ ಬಂದು ಆ್ಯಂಟಿಜೆನ್ ಟೆಸ್ಟ್ ಕಿಟ್​ಗಳ ಮೂಲಕ‌ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.

ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿರುವ ವರ್ತಕರು

ಪ್ರತಿದಿನ 50 ಮಂದಿಗೆ ಕೋವಿಡ್​ ಪರೀಕ್ಷೆ ಮಾಡಲಾಗ್ತಿದೆ. ನಗರ ಪಾಲಿಕೆಯ ನಿರ್ಧಾರಕ್ಕೆ ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿದೆ.

ABOUT THE AUTHOR

...view details