ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ 6 ಮಂದಿಗೆ ಕೊರೊನಾ ಪಾಸಿಟಿವ್​

ನೌಕರನ ಸೋಂಕಿನಿಂದ ಸರಸ್ವತಿಪುರಂನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಸೀಲ್ ಡೌನ್ ಆಗಿದ್ದು, ಬ್ಯಾಂಕ್ ಗೆ ಭೇಟಿಕೊಟ್ಟವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭಿರಾಮ್ ಜಿ.ಶಂಕರ್
ಅಭಿರಾಮ್ ಜಿ.ಶಂಕರ್

By

Published : Jun 19, 2020, 11:14 PM IST

ಮೈಸೂರು: ಆರು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 17ಕ್ಕೆ ಏರಿದೆ.

ಕೊರೊನಾ ಬುಲೆಟಿನ್​

ರೋಗಿ ಸಂಖ್ಯೆ 5921 ಸಂಪರ್ಕದಿಂದ 50 ವರ್ಷದ ಪುರುಷ, 32 ವರ್ಷದ ಪುರುಷ, 82 ವರ್ಷದ ವೃದ್ಧೆ, 60 ವರ್ಷದ ವೃದ್ಧೆ ಹಾಗೂ 7553 ರೋಗಿ ಸಂಪರ್ಕದಿಂದ 60 ವರ್ಷದ ವೃದ್ಧೆ, ರೋಗಿ ಸಂಖ್ಯೆ 6904 ಸಂಪರ್ಕದಿಂದ 29 ವರ್ಷದ ಯುವತಿಗೆ ಕೊರೊನಾ ದೃಢ ಪಟ್ಟಿದೆ.

ಮೈಸೂರಿನಲ್ಲಿ ಇದುವರೆಗೂ 129 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 112 ಮಂದಿ ಗುಣಮುಖರಾಗಿದ್ದಾರೆ. 17 ಸಕ್ರಿಯ ಪ್ರಕರಣಗಳಿವೆ. ಈವರೆಗೆ 15,645 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, 15,516 ಜನರ ವರದಿ ನೆಗೆಟಿವ್ ಬಂದಿದೆ.

ಜಿಲ್ಲಾಧಿಕಾರಿ ಪ್ರಕಟಣೆ

ಬ್ಯಾಂಕ್​ಗೆ ಭೇಟಿ ನೀಡಿದವರು ತಪಾಸಣೆಗೆ ಒಳಗಾಗಿ:

ನೌಕರನ ಸೋಂಕಿನಿಂದ ಸರಸ್ವತಿಪುರಂನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಸೀಲ್ ಡೌನ್ ಆಗಿದ್ದು, ಬ್ಯಾಂಕ್ ಗೆ ಭೇಟಿಕೊಟ್ಟವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details