ಮೈಸೂರು:ಮೈಸೂರಿನ ಮೊದಲ ಕೊರೊನಾ ಪಾಸಿಟಿವ್ ವ್ಯಕ್ತಿ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಮೈಸೂರು ನಾಗರಿಕರ ವೇದಿಕೆ ವತಿಯಿಂದ ಏರ್ಪಡಿಸಿದ್ದ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಪಾಸಿಟಿವ್ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದಾರೆ. ಬಹುಶಃ ಅವರ ಸ್ಯಾಂಪಲ್ ವರದಿ ನೆಗೆಟಿವ್ ಬರುವ ಸಾಧ್ಯತೆ ಇದೆ. ಇಂದಿಗೆ ಅವರ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದೆ. ಇಂದು ಅವರ ಪರೀಕ್ಷೆ ನಡೆಸಿ ವರದಿ ತರಿಸಿಕೊಳ್ಳುತ್ತೇವೆ. ಇಂದು ಅಥವಾ ನಾಳೆ ಅವರು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದರು.
ನಂಜನಗೂಡು ಜುಬಿಲೆಂಟ್ಸ್ ಕಾರ್ಖಾನೆ ಪಾಸಿಟಿವ್ ಪ್ರಕರಣ:ಎಲ್ಲರ ವರದಿ ನೆಗೆಟಿವ್ ಬರುವವರೆಗೆ ಕಾರ್ಖಾನೆ ಬಂದ್ ಕಡ್ಡಾಯ. ಇಡೀ ಕಾರ್ಖಾನೆ ಸಿಬ್ಬಂದಿಗಳ ವರದಿ ನೆಗೆಟಿವ್ ಬಂದ ಮೇಲಷ್ಟೇ ಮತ್ತೆ ಕಾರ್ಖಾನೆ ಓಪನ್ ಮಾಡಲು ಸೂಚನೆ ನೀಡಲಾಗುವುದು ಎಂದರು. ಕಾರ್ಖಾನೆ ನೌಕರರಿಗೆ ಕೊರೊನಾ ಹೇಗೆ ತಗುಲಿತು ಅನ್ನೋದರ ಬಗ್ಗೆ ಪೊಲೀಸ್ ತನಿಖೆ ಆಗಲಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ತನಿಖೆ ನಡೆಸುತ್ತಿದ್ದಾರೆ. ಕಾರ್ಖಾನೆ ಸ್ಪಂದಿಸುತ್ತಿಲ್ಲ ಅನ್ನೋ ಮಾಹಿತಿಗೆ ಎಸ್‌ಪಿ ಅವರೇ ಉತ್ತರ ಕೊಡ್ತಾರೆ. ಚೀನಾದಿಂದ ಬಂದ ಕಂಟೈನರ್ ಹಾಗೂ ಕಚ್ಚಾ ವಸ್ತುಗಳ ಸ್ಯಾಂಪಲ್ ಟೆಸ್ಟ್ ಮಾಡ್ತಿದ್ದೇವೆ ಎಂದರು.