ಮೈಸೂರು: ಕೊರೊನಾ ಮುಕ್ತವಾಗಿದೆ ಎಂದು ಸಂತಸದಲ್ಲಿದ್ದ ಸಾಂಸ್ಕೃತಿಕ ನಗರಿ ಮೈಸೂರು ಜನತೆ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಸಂತಸದಲ್ಲಿದ್ದ ಜನತೆಗೆ ಶಾಕ್: ಕೊರೊನಾ ಮುಕ್ತ ಮೈಸೂರಲ್ಲಿ ಮತ್ತೆ ಸೋಂಕು ಪತ್ತೆ!
ಕೊರೊನಾ ವೈರಸ್ ಮುಕ್ತವಾಗಿದ್ದ ಮೈಸೂರಿನಲ್ಲಿ ಈಗ ಮತ್ತೆ ಕೊರೊನಾ ವಕ್ಕರಿಸಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಮೈಸೂರಲ್ಲಿ ಮತ್ತೇ ಕೊರೊನಾ ಆರ್ಭಟ
ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಹಂತದ ಅಲೆ ಆರಂಭವಾಗಿದೆ. ಕೊರೊನಾ ವೈರಸ್ ಮುಕ್ತವಾಗಿದ್ದ ಮೈಸೂರಿನಲ್ಲಿ ಈಗ ಮತ್ತೆ ಕೊರೊನಾ ವಕ್ಕರಿಸಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ರೋಗಿ ಸಂಖ್ಯೆ 1225 ಈತ ಮಹಾರಾಷ್ಟ್ರದ ಮುಂಬೈನಿಂದ ಮೈಸೂರಿಗೆ ಬಂದಿದ್ದ. ಈತನನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಈಗ ಸೋಂಕು ದೃಢಪಟ್ಟಿರುವು ಆತಂಕ ಮೂಡಿಸಿದೆ.