ಮೈಸೂರು:ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,45 ಲಕ್ಷ ದಾಟಿದ್ದರೆ ಕರ್ನಾಟಕದಲ್ಲಿ 2,283 ಮಂದಿಗೆ ಸೋಂಕು ದೃಢವಾಗಿದೆ. ಲಾಕ್ಡೌನ್ ಸಡಿಲಿಕೆಯಾದಾಗಿನಿಂದ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುತ್ತಿದೆ.
ಬಳಸಿದ ಮಾಸ್ಕ್ಗಳನ್ನು ಕಸದಬುಟ್ಟಿಗೆ ಹಾಕಿ...ಚಿತ್ರದ ಮೂಲಕ ಕಲಾವಿದನಿಂದ ಜಾಗೃತಿ - Artist requested to use dustbin for dump used masks
ಜನರು ತಾವು ಬಳಸಿದ ಮಾಸ್ಕ್ , ಗ್ಲೌಸ್ಗಳನ್ನು ಕಸದಬುಟ್ಟಿಗೆ ಎಸೆಯದೆ ಎಲ್ಲೆಂದರಲ್ಲಿ ಬಿಸಾಡುತ್ತಿದ್ಧಾರೆ. ಆದರೆ ಇದರಿಂದ ಕೂಡಾ ಸುಲಭವಾಗಿ ಕೊರೊನಾ ಹರಡುವ ಸಾಧ್ಯತೆ ಇದೆ. ಮೈಸೂರಿನ ಕಲಾವಿದರೊಬ್ಬರು ಚಿತ್ರಕಲೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇನ್ನು ಜನರು ಮನೆಯಿಂದ ಹೊರ ಹೋಗುವಾಗ ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್, ಗ್ಲೌಸ್ ಧರಿಸುತ್ತಾರೆ. ಹೀಗೆ ಬಳಸಿದ ಮಾಸ್ಕ್, ಗ್ಲೌಸ್ಗಳನ್ನು ತೆಗೆದು ಕಸದಬುಟ್ಟಿಗೆ ಹಾಕಿದ್ದಲ್ಲಿ ಅದು ಸುರಕ್ಷಿತ. ಆದರೆ ಕೆಲವೆಡೆ ಈ ಬಗ್ಗೆ ಸಾರ್ವಜನಿಕರು ಕೇರ್ ಮಾಡುತ್ತಿಲ್ಲ. ತಾವು ಬಳಸಿದ ಮಾಸ್ಕ್, ಗ್ಲೌಸ್ಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಇದನ್ನು ಗಮನಿಸಿದ ಮೈಸೂರಿನ ಕಾವಾ ವಿದ್ಯಾರ್ಥಿ ಶಿವರಂಜನ್ ಎಂಬುವವರು ಕಸದ ತೊಟ್ಟಿಯ ಮೇಲೆ ಜಾಗೃತಿ ಚಿತ್ರವೊಂದನ್ನು ಬಿಡಿಸಿದ್ದಾರೆ. ಕಸದ ತೊಟ್ಟಿ ಮುಂಭಾಗ ಎರಡು ಕಾಗೆಗಳು ಜನರು ಬಿಸಾಡಿರುವ ಮಾಸ್ಕನ್ನು ಕೊಕ್ಕಿನಲ್ಲಿ ಕಚ್ಚುತ್ತಿರುವಂತೆ ಶಿವರಂಜನ್ ಚಿತ್ರ ಬರೆದಿದ್ದಾರೆ.
ಈ ರೀತಿ ತ್ಯಾಜ್ಯದಿಂದಲೂ ಕೂಡಾ ಕೊರೊನಾ ಹರಡುವ ಸಾಧ್ಯತೆ ಇದೆ. ಹೀಗೆ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಬಿಸಾಡುವುದರಿಂದ ಪ್ರಾಣಿ, ಪಕ್ಷಿಗಳು ಅದನ್ನು ಅಲ್ಲಿಂದ ತಂದು ಬೇರೆ ಕಡೆಗೆ ಹೊತ್ತೊಯ್ಯಬಹುದು. ಇದು ಬಹಳ ಅಪಾಯಕಾರಿ ಎಂದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಸ್ಕ್, ಗ್ಲೌಸ್ ಅಥವಾ ಇನ್ನಿತರ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಿ ಎಂದು ಜಾಗೃತಿ ಮೂಡಿಸಲು ಕಲಾವಿದ ಪ್ರಯತ್ನಿಸಿದ್ದಾರೆ.