ಕರ್ನಾಟಕ

karnataka

ETV Bharat / state

ಕರ್ಪೂರ ವ್ಯಾಪಾರಿ ಸೇರಿದಂತೆ ನಾಲ್ವರಿಗೆ ಕೊರೊನಾ: ಬನ್ನೂರಿನ ಜನರಲ್ಲಿ ಹೆಚ್ಚಿದ ಆತಂಕ - ಕರ್ಪೂರ ವ್ಯಾಪಾರಿ ಸೇರಿದಂತೆ ನಾಲ್ವರಿಗೆ ಕೊರೊನಾ

ಬನ್ನೂರು ಪಟ್ಟಣದಲ್ಲಿ ಕರ್ಪೂರ ವ್ಯಾಪಾರಿ ಸೇರಿದಂತೆ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Bannur
ಕರ್ಪೂರ ವ್ಯಾಪಾರಿ ಸೇರಿದಂತೆ ನಾಲ್ವರಿಗೆ ಕೊರೊನಾ: ಬನ್ನೂರಿನ ಜನರಲ್ಲಿ ಹೆಚ್ಚಿದ ಆತಂಕ

By

Published : Jul 11, 2020, 12:21 PM IST

ಮೈಸೂರು: ಕರ್ಪೂರ ವ್ಯಾಪಾರಿ ಸೇರಿದಂತೆ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಬನ್ನೂರಿನ ಜನರಲ್ಲಿ ಆತಂಕ ಹೆಚ್ಚಾಗಿದೆ.

ಕರ್ಪೂರ ವ್ಯಾಪಾರಿ ಸೇರಿದಂತೆ ನಾಲ್ವರಿಗೆ ಕೊರೊನಾ: ಬನ್ನೂರಿನ ಜನರಲ್ಲಿ ಹೆಚ್ಚಿದ ಆತಂಕ

ಬನ್ನೂರು ಪಟ್ಟಣ ಹಾಗೂ ನಿಂಗೇಗೌಡನ ಹುಂಡಿ ಗ್ರಾಮದ ಇಬ್ಬರು ವ್ಯಕ್ತಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಬನ್ನೂರು ಪಟ್ಟಣದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಬಳಿಯ ನಿವಾಸಿ 21 ವರ್ಷದ ಕರ್ಪೂರ ವ್ಯಾಪಾರಿಗೆ ಹಾಗೂ ತಾಲ್ಲೂಕಿನ ನಿಂಗೇಗೌಡನ ಹುಂಡಿ ಗ್ರಾಮದ ಸಕ್ಕರೆ ಕಾಯಿಲೆ ಪೀಡಿತ 61 ವರ್ಷದ ವ್ಯಕ್ತಿಗೂ ಪಾಸಿಟಿವ್ ಬಂದಿದೆ. ಇವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇವರು ಡಯಾಲಿಸಿಸ್ ಮಾಡಿಸಿಕೊಂಡಿದ್ದರು.

ಡಯಾಲಿಸಿಸ್ ಮಾಡಿದ್ದ ನಾಲ್ವರು ಆಸ್ಪತ್ರೆಯ ಸಿಬ್ಬಂದಿಗಳಿಗೆ ಕ್ವಾರೆಂಟೈನ್ ಮಾಡಲಾಗಿದೆ. ಬನ್ನೂರು ಹೋಬಳಿಯಲ್ಲಿ ದಾಸೇಗೌಡನ ಕೊಪ್ಪಲು ಗ್ರಾಮದ 29 ವರ್ಷದ ಯುವಕನಿಗೆ ಹಾಗೂ ಕುಂತನಹಳ್ಳಿ ಗ್ರಾಮದ 50 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ.

ABOUT THE AUTHOR

...view details