ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಹೆಚ್ಚಾಯ್ತು ಕೊರೊನಾ: ಚಿಕಿತ್ಸೆಗಾಗಿ 4 ಆಸ್ಪತ್ರೆಗಳು ಮೀಸಲು

ಮೈಸೂರಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ಕೊರೊನಾ ಚಿಕಿತ್ಸೆಗೆ 4 ಆಸ್ಪತ್ರೆ ಮೀಸಲಿಟ್ಟಿರುವುದಲ್ಲದೆ, ಹಲವು ಅತಿಥಿ ಗೃಹಗಳು, ವಸತಿ ಶಾಳೆಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಮುಂದಾಗಿದೆ.

Corona infection rate riced in mysuru; 4 Hospitals reserved for patients
ಮೈಸೂರಲ್ಲಿ ಹೆಚ್ಚಾಯ್ತು ಕೊರೊನಾ: ಚಿಕಿತ್ಸೆಗಾಗಿ 4 ಆಸ್ಪತ್ರೆಗಳು ಮೀಸಲು

By

Published : Jul 8, 2020, 5:19 PM IST

ಮೈಸೂರು:ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಚಿಕಿತ್ಸೆಗಾಗಿ 4 ಆಸ್ಪತ್ರೆಗಳನ್ನು ಜಿಲ್ಲಾಡಳಿತ ಈಗಾಗಲೇ ಮೀಸಲಿಟ್ಟಿದೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಎಸ್​​​​ಐ, ನಂಜನಗೂಡಿನ ಹೊಸಕೋಟೆ ಬಳಿ ಇರುವ ಮೊರಾರ್ಜಿ ವಸತಿ ಶಾಲೆ, ವರಕೋಡು ಬಳಿ ಇರುವ ಆಸ್ಪತ್ರೆ, ಬಿಎಂ ಆಸ್ಪತ್ರೆ, ಕೆಎಸ್​​​​ಒಯುನಲ್ಲಿ ಅತಿಥಿ ಗೃಹಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ ಎಂದರು.

ಮೈಸೂರಲ್ಲಿ ಹೆಚ್ಚಾಯ್ತು ಕೊರೊನಾ: ಚಿಕಿತ್ಸೆಗಾಗಿ 4 ಆಸ್ಪತ್ರೆಗಳು ಮೀಸಲು

ಹಳೆಯ ಕೋವಿಡ್-19 ಆಸ್ಪತ್ರೆಯನ್ನು ಐಆರ್​​ಐ ಪ್ರಕರಣಗಳಿಗೆ ಮಾತ್ರ ಬಳಸಿಕೊಳ್ಳಲಾಗುವುದು ಎಂದರು. ಗ್ರಾಮಾಂತರ ಪ್ರದೇಶದಲ್ಲಿ ಹೋಮ್​​ ಕ್ವಾರಂಟೈನ್ ಮಾಡಲು ಆಗುವುದಿಲ್ಲ. ಅದಕ್ಕೆ ಪ್ರತ್ಯೇಕವಾದ ಕೊಠಡಿ, ಶೌಚಾಲಯ ಬೇಕು. ಗ್ರಾಮೀಣ ಭಾಗದಲ್ಲಿ ಅಂತಹ ವ್ಯವಸ್ಥೆ ಸಿಗುವುದು ಕಷ್ಟ. ಹಾಗಾಗಿ ಹೋಂ ಕ್ವಾರಂಟೈನ್ ಮಾಡದೆ ಆಸ್ಪತ್ರೆಗೆ ಸೇರಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 220 ಕಂಟೈನ್ಮೆಂಟ್ ಝೋನ್​​​​ಗಳಿವೆ. ಸಾರ್ವಜನಿಕರು ಆತಂಕ ಪಡುವುದಕ್ಕಿಂತ ಎಚ್ಚರಿಕೆ ವಹಿಸಬೇಕು.‌ ಸಮುದಾಯದ ಮಟ್ಟದಲ್ಲಿ ಕೊರೊನಾ ಸೋಂಕು ಹರಡಿಲ್ಲ ಎಂದರು.

ABOUT THE AUTHOR

...view details