ಮೈಸೂರು: ಜುಬಿಲಂಟ್, ಜೆ.ಕೆ.ಟೈಯರ್ಸ್ ನಂತರ ಇಲ್ಲಿನ ಗಾರ್ಮೆಂಟ್ಸ್ ಕಾರ್ಖಾನೆಯ ಕಾರ್ಮಿಕರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, 3 ಸಾವಿರ ಕಾರ್ಮಿಕರಲ್ಲಿ ಮತ್ತು ತಿ.ನರಸೀಪುರ ತಾಲೂಕಿನ ಜನತೆಗೆ ಮತ್ತಷ್ಟು ಆತಂಕ ಎದುರಾಗಿದೆ.
ಜುಬಿಲಂಟ್ ಬಳಿಕ ಗಾರ್ಮೆಂಟ್ಸ್ ಕಾರ್ಖಾನೆ ನೌಕರರಿಗೆ ವಕ್ಕರಿಸಿದ ಕೊರೊನಾ
ಮೈಸೂರಿನ ತಿ.ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದ ಬಳಿಯಿರುವ ಶಾಹಿ ಗಾರ್ಮೆಂಟ್ಸ್ನ ಮಹಿಳಾ ಕಾರ್ಮಿಕರಿಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಗಾರ್ಮೆಂಟ್ಸ್ ಅನ್ನು ಸೀಲ್ಡೌನ್ ಮಾಡಲು ತಾಲೂಕು ಆಡಳಿತ ಮುಂದಾಗಿದೆ.
ತಾಲೂಕಿನ ನಿಲಸೋಗೆ ಗ್ರಾಮದ ಬಳಿ ಇರುವ ಶಾಹಿ ಗಾರ್ಮೆಂಟ್ಸ್ನ ಮಹಿಳಾ ಕಾರ್ಮಿಕರಿಬ್ಬರಿಗೆ ಸೋಂಕು ದೃಢಪಟ್ಟಿದೆ. ಮೂಗೂರು ಗ್ರಾಮದ ಮಹಿಳೆಯೊಬ್ಬರಿಗೆ ಜ್ವರದ ಲಕ್ಷಣ ಕಾಣಿಸಿಕೊಂಡ ಬೆನ್ನಲ್ಲೇ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಖಚಿತವಾಗಿದೆ. ಮಹಿಳೆಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 8 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಸೋಂಕಿತ ಮಹಿಳೆಯಿಂದ ಮತ್ತಷ್ಟು ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗಾರ್ಮೆಂಟ್ಸ್ ಸೀಲ್ಡೌನ್ ಮಾಡಲು ತಾಲೂಕು ಆಡಳಿತ ಮುಂದಾಗಿದೆ. ಗಾರ್ಮೆಂಟ್ಸ್ನ ಬೇಜವಾಬ್ದಾರಿತನಕ್ಕೆ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.