ಮೈಸೂರು:ತಂದೆಯ ಶವ ಬೇಡ, ಆದರೆ ತಂದೆ ದುಡಿದ ಹಣ ಬೇಕು. ಕೊರೊನಾ ಕಾಲದಲ್ಲೊಂದು ಮಾನವೀಯತೆ ಮರೆಯಾಗಿರುವ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ.
'ತಂದೆಯ ಹೆಣ ಬೇಡ ನೀವೇ ಮಣ್ಣು ಮಾಡಿ, ಅವರ ಹತ್ತಿರ ಹಣ ಇದೆ ತಂದುಕೊಡಿ' - ಕೊರೊನಾ ಸೋಂಕಿತ ಶವ ಅನಾಥ
ಕೊರೊನಾದಿಂದ ಸಾವಿಗೀಡಾದ ತಂದೆಯ ಶವ ಪಡೆಯಲು ತಿರಸ್ಕರಿಸಿದ ಮಗನೊಬ್ಬ, ಸಾವಿನ ಸುದ್ದಿ ಮುಟ್ಟಿಸಿದ ವ್ಯಕ್ತಿಗೆ, ನೀವೇ ಅಂತ್ಯಕ್ರಿಯೆ ಮುಗಿಸಿ ಎಂದಿದ್ದಾನೆ. ಆದರೆ ತಂದೆಯ ಬಳಿ ಇರುವ 6 ಲಕ್ಷ ರೂ ಹಣವನ್ನು ಮಾತ್ರ ನನಗೆ ತಂದು ಕೊಡಿ ಎಂದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೊರೊನಾ ಸೋಂಕಿತ ಶವ ಅನಾಥ
ಹೆಬ್ಬಾಳದ ಸೂರ್ಯ ಬೇಕರಿ ಬಳಿಯ ನಿವಾಸಿಯೊಬ್ಬರು ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ. ನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಅವರು ತಂದೆ ಕೋವಿಡ್‌ನಿಂದ ಮೃತಪಟ್ಟಿರುವ ಬಗ್ಗೆ ಮಗನಿಗೆ ಫೋನ್ ಮೂಲಕ ವಿಷಯ ಮುಟ್ಟಿಸಿದ್ದಾರೆ. ಆದರೆ ಕೊರೊನಾದಿಂದ ಸಾವಿಗೀಡಾದ ತಂದೆಯ ಶವ ಪಡೆಯಲು ಒಪ್ಪದ ಮಗ, 'ನೀವೇ ಅಂತ್ಯಕ್ರಿಯೆ ಮುಗಿಸಿ..' ಎಂದಿದ್ದಾನೆ. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣವನ್ನು ತಂದು ಕೊಡಿ ಎಂದು ತಿಳಿಸಿದ್ದಾನಂತೆ. ಹೀಗಾಗಿ, ಬಂಧು-ಬಳಗ ಇದ್ದರೂ ಕೊರೊನಾ ಸೋಂಕಿತನ ಶವ ಅನಾಥವಾಗಿದೆ.
'ತಂದೆಯ ಹೆಣ ಬೇಡ ನೀವೇ ಮಣ್ಣು ಮಾಡಿ, ಅವರ ಹತ್ತಿರ ಹಣ ಇದೆ ತಂದುಕೊಡಿ'
Last Updated : May 23, 2021, 3:41 PM IST