ಮೈಸೂರು: ನಗರದಲ್ಲಿ ಮತ್ತೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕವು ಹೆಚ್ಚಾಗಿದೆ. ಈ ಮಧ್ಯೆ ಸೋಂಕಿತ ಪ್ರದೇಶಗಳು ಸೀಲ್ಡೌನ್ ಮಾಡಾಗುತ್ತಿದೆ.
ಪ್ರಾರಂಭದಲ್ಲಿ ಜುಬಿಲಂಟ್ ಕಾರ್ಖಾನೆಯಿಂದ ಕೊರೊನಾ ಹಾಟ್ಸ್ಪಾಟ್ ಆಗಿದ್ದ ಮೈಸೂರು, 40 ದಿನಗಳಲ್ಲಿ ಕೊರೊನಾ ಮುಕ್ತ ನಗರ ಆಗಿತ್ತು , ಆದರೆ 2ನೇ ಹಂತದಲ್ಲಿ ಈಗ ಮಹಾರಾಷ್ಟ್ರ, ತಮಿಳುನಾಡು, ಉತ್ತರ ಭಾರತದ ಕಡೆಯಿಂದ ಬಂದವರಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಮೈಸೂರಲ್ಲಿ ಹೆಚ್ಚಾಯ್ತು ಕೊರೊನಾ: ಸೀಲ್ಡೌನ್ ಆಗಿರುವ ಏರಿಯಾಗಳೆಷ್ಟು ಗೊತ್ತಾ..? ಜೊತೆಯಲ್ಲಿ ಕೊರೊನಾ ಹಾಟ್ಸ್ಪಾಟ್ ಆಗಿರುವ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಕೆಎಎಸ್ಆರ್ಪಿ ಪೋಲಿಸರಿಂದ ಮತ್ತೆ ಮೈಸೂರಿನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಜಾಸ್ತಿಯಾಗುತ್ತಿದ್ದು , ಈ ಹಿನ್ನೆಲೆ ಸೋಂಕಿತ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗುತ್ತಿದೆ.
ಸೀಲ್ಡೌನ್ ಆದ ಪ್ರದೇಶಗಳು ಎಷ್ಟು?
ನಗರದಲ್ಲಿ ಮತ್ತೆ ಕೊರೊನಾ ಸೋಂಕಿತ ಪ್ರಕರಣಗಳು ಜಾಸ್ತಿಯಾದ ಹಿನ್ನೆಲೆ ಇಲ್ಲಿಯವರಗೆ ನಗರದ 12 ಏರಿಯಾಗಳಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿಗಳು ಸೀಲ್ಡೌನ್ ಮಾಡಿದ್ದಾರೆ. ಮೈಸೂರು ನಗರದ ಇಟ್ಟಿಗೆ ಗೂಡು, ರಾಮಕ್ರಷ್ಣ ನಗರ, ಶ್ರೀರಾಂಪುರ, ಟಿ.ಕೆ ಲೇಔಟ್, ಜೆ.ಪಿ.ನಗರ, ಕ್ರಷ್ಣ ವಿಲಾಸ ರಸ್ತೆ, ಜೆ.ಸಿ.ಲೇಔಟ್, ವಿಜಯ ನಗರ, ಗೋಕುಲಂ, ಪ್ರದೇಶದ ಹನ್ನೆರಡು ಏರಿಯಾಗಳನ್ನು ಸದ್ಯಕ್ಕೆ ಸೀಲ್ಡೌನ್ ಮಾಡಲಾಗಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ತಿಳಿಸಿದರು.