ಕರ್ನಾಟಕ

karnataka

ETV Bharat / state

ಶಾಹಿ ಗಾರ್ಮೆಂಟ್ಸ್​​​ನ 21 ಮಂದಿ ಮಹಿಳಾ ಕಾರ್ಮಿಕರಿಗೆ ಕೊರೊನಾ - Corona for the 21 women workers

ಶಾಹಿ ಗಾರ್ಮೆಂಟ್ಸ್​​ನ 21 ಮಂದಿ ಮಹಿಳಾ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ತಾಲೂಕು ಆಡಳಿತ ಶಾಹಿ ಗಾರ್ಮೆಂಟ್ಸ್​​ನಲ್ಲಿಯೇ ಕಾರ್ಮಿಕರಿಗೆ ಆ್ಯಂಟಿಜೆನ್ ಟೆಸ್ಟ್ ನಡೆಸಲು ಮುಂದಾಗಿದೆ.

Shahi Gaments
ಶಾಹಿ ಗಾಮೆಂಟ್ಸ್​ನ 21 ಮಂದಿ ಮಹಿಳಾ ಕಾರ್ಮಿಕರಿಗೆ ಕೊರೊನಾ..

By

Published : Aug 3, 2020, 11:31 AM IST

ಮೈಸೂರು: ಶಾಹಿ ಗಾರ್ಮೆಂಟ್ಸ್​ನ 21 ಮಂದಿ ಮಹಿಳಾ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಾರ್ಖಾನೆಯ ಸಿಬ್ಬಂದಿಗಳು ಬೆಚ್ಚಿ ಬಿದ್ದಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.

ಶಾಹಿ ಗಾರ್ಮೆಂಟ್ಸ್​​ನ 21 ಮಂದಿ ಮಹಿಳಾ ಕಾರ್ಮಿಕರಿಗೆ ಕೊರೊನಾ

ಶಾಹಿ ಗಾರ್ಮೆಂಟ್ಸ್​​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ತಾಲೂಕು ಆಡಳಿತ ಶಾಹಿ ಗಾಮೆಂಟ್ಸ್​ನಲ್ಲಿಯೇ ಕಾರ್ಮಿಕರಿಗೆ ಆ್ಯಂಟಿಜೆನ್ ಟೆಸ್ಟ್ನಡೆಸಲು ಮುಂದಾಗಿದೆ. ಪಟ್ಟಣದ ಸುಶೀಲಮ್ಮ ಕಾಲೋನಿಯ 22 ವರ್ಷದ ಯುವತಿ, ಸೋಸಲೆ ಗ್ರಾಮ ಪಂಚಾಯಿತಿಯ 45 ವರ್ಷದ ಅಟೆಂಡರ್ ಹಾಗೂ ಇಂದಿರಾ ಕಾಲೋನಿಯ 47 ವರ್ಷದ ವ್ಯಕ್ತಿ, ಬನ್ನೂರು ಪಟ್ಟಣದಲ್ಲಿ 09, ನಿಲಸೋಗೆ ಗ್ರಾಮದಲ್ಲಿ 01, ಗರ್ಗೇಶ್ವರಿ ಗ್ರಾಮದಲ್ಲಿ 04, ರಂಗ ಸಮುದ್ರದಲ್ಲಿ 03 ಹಾಗೂ ಅಗಸ್ತ್ಯಾಪುರದಲ್ಲಿ 01 ಪ್ರಕರಣ ಗಳು ಪತ್ತೆಯಾಗಿದೆ.

ಇನ್ನು ತಿ.ನರಸೀಪುರ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 167 ಕ್ಕೇರಿದೆ. ಜುಬಿಲಂಟ್, ಜೆಕೆ ಟೈರ್ಸ್ ಫ್ಯಾಕ್ಟರಿ ನಂತರ ಶಾಹಿ ಗಾಮೆಂಟ್ಸ್​ನಲ್ಲಿ ಕೊರೊನಾ ಅಟ್ಟಹಾಸ ಮೆರೆಯಲು ಮುಂದಾಗಿದೆ.

ABOUT THE AUTHOR

...view details