ಮೈಸೂರು: ಸಾಂಕ್ರಾಮಿಕ ರೋಗದ ಭಯದಿಂದ ಪ್ರಸಿದ್ಧ ದೇವಾಲಯಗಳಲ್ಲಿ ಭಕ್ತರ ಭೇಟಿ ಕಡಿಮೆಯಾಗಿದ್ದು, ಇದರಿಂದ ದೇವಾಲಯಗಳ ಆದಾಯ ಕೂಡ ಕಡಿಮೆಯಾಗಿದೆ.
ಅನ್ಲಾಕ್ ಆದ್ರೂ ದೇವಸ್ಥಾನಗಳಲ್ಲಿ ಭಕ್ತರಿಲ್ಲ ಕೊರೊನಾ ಭಯದಿಂದ ಲಾಕ್ಡೌನ್ ಆಗಿದ್ದ ದೇವಾಲಯಗಳು ಈಗ ಮತ್ತೆ ಓಪನ್ ಆಗಿವೆ. ಈ ಸಂದರ್ಭದಲ್ಲಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಶೇ.40 ರಷ್ಟು ಮಾತ್ರ ಇದ್ದು, ಇದರಿಂದ ದೇವಾಲಯಗಳ ಆದಾಯವೂ ಸಹ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ದೇವಾಲಯಗಳ ನಿರ್ವಹಣೆ, ಸಂಬಳ ಸೇರಿದಂತೆ ಇತರ ವೆಚ್ಚಗಳ ನಿರ್ವಹಣೆಗೆ ಕಷ್ಟವಾಗಿದೆ. ಇದಕ್ಕಾಗಿ ಈ ಹಿಂದೆ ದೇವಾಲಯದ ಆದಾಯವನ್ನು ಬ್ಯಾಂಕ್ನಲ್ಲಿ ಇಟ್ಟ ಠೇವಣಿ ಹಣದ ಬಡ್ಡಿಯಿಂದ ಹಾಗೂ ಠೇವಣಿ ಹಣವನ್ನು ಸ್ವಲ್ಪ ತೆಗೆದುಕೊಂಡು ವೆಚ್ಚಕ್ಕೆ ಉಪಯೋಗಿಸಲಾಗುತ್ತಿದೆ.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಮೈಸೂರಿನಲ್ಲಿ ಎಷ್ಟು ದೇವಾಲಯಗಳಿವೆ ?:
ಮೈಸೂರು ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ 1,279 ದೇವಾಲಯಗಳಿದ್ದು, ಅದರಲ್ಲಿ ಗ್ರೂಪ್ 'ಎ' ಗೆ ಸೇರಿದ 5 ದೇವಾಲಯ, ಗ್ರೂಪ್ 'ಬಿ' ಗೆ ಸೇರಿದ 4 ದೇವಾಲಯ, ಗ್ರೂಪ್ 'ಸಿ' ಗೆ ಸೇರಿದ 1,570 ದೇವಾಲಯಗಳು ಇವೆ. ಮುಖ್ಯವಾಗಿ ಗ್ರೂಪ್ 'ಎ' ದೇವಾಲಯದಲ್ಲಿ ಚಾಮುಂಡೇಶ್ವರಿ ದೇವಸ್ಥಾನ, ನಂಜನಗೂಡಿನ ಶ್ರೀಕಂಠೇಶ್ವರ, ತಲಕಾಡು ದೇವಸ್ಥಾನ, ಪಿರಿಯಾಪಟ್ಟಣದ ಮಸಣಕಮ್ಮ ದೇವಸ್ಥಾನ ಹಾಗೂ ನಂಜಬಹದ್ದೂರ್ ಛತ್ರ ಸೇರಿವೆ. ಗ್ರೂಪ್ 'ಬಿ' ನಲ್ಲಿ ಚುಂಚನಕಟ್ಟೆ ಶ್ರೀ ರಾಮ ದೇವಸ್ಥಾನ, ಗುಂಜನರಸಿಂಹ ಸ್ವಾಮಿ ದೇವಸ್ಥಾನ, ತ್ರಿಪುರ ಸುಂದರಿ ದೇವಸ್ಥಾನ ಹಾಗೂ ಚಿಕ್ಕಮ್ಮ ಬೆಟ್ಟದ ಚಿಕ್ಕಮ್ಮ ತಾಯಿ ದೇವಸ್ಥಾನ ಪ್ರಮುಖವಾಗಿದೆ.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಇದರಲ್ಲಿ ಪ್ರಮುಖವಾಗಿ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಅತಿ ಹೆಚ್ಚು ಆದಾಯ ತರುವ ದೇವಾಲಯಗಳಾಗಿದ್ದು, ಲಾಕ್ಡೌನ್ ಸಂದರ್ಭದಲ್ಲಿ ಇಲ್ಲಿಯವರೆಗೆ ಕಳೆದ 6 ತಿಂಗಳಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ 18 ಕೋಟಿ ಆದಾಯ ನಷ್ಟವಾಗಿದೆ. ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯದಲ್ಲಿ 2 ಕೋಟಿಗೂ ಹೆಚ್ಚು ಆದಾಯ ಕಡಿಮೆಯಾಗಿದೆ.