ಮೈಸೂರು: ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ನಗರದಲ್ಲಿ ಟ್ರಿನ್ ಟ್ರಿನ್ ಸೈಕಲ್ ಸೇವೆಯನ್ನು ಸಹ ಬಂದ್ ಮಾಡಲಾಗಿದೆ.
ಕೊರೊನಾ ಭೀತಿ: ಮೈಸೂರಲ್ಲಿ ಟ್ರಿನ್ ಟ್ರಿನ್ ಸೈಕಲ್ ಸೇವೆ ಬಂದ್
ಕೊರೊನಾ ಭೀತಿಯಿಂದ ಮೈಸೂರಲ್ಲಿ ಟ್ರಿನ್ ಟ್ರಿನ್ ಸೈಕಲ್ ಸೇವೆಯನ್ನು ಸಹ ಬಂದ್ ಮಾಡಲಾಗಿದೆ.
ನಗರದ ಜನಸಾಮಾನ್ಯರು, ಪ್ರವಾಸಿಗರು, ವಿದ್ಯಾರ್ಥಿಗಳ ಸೇವೆಗೆಂದು ಆರಂಭಿಸಿದ್ದ ಟ್ರಿನ್ ಟ್ರಿನ್ ಸೇವೆಯನ್ನು ಸಹ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದು, ಎಲ್ಲಾ ಸ್ಟ್ಯಾಂಡ್ಗಳಲ್ಲಿದ್ದ ಸೈಕಲ್ಗಳನ್ನು ವಾಪಸ್ ತೆಗೆದುಕೊಂಡು ಹೋಗಲಾಗಿದೆ. ವಿದೇಶಿಗರು ಸೈಕಲ್ ಬಳಸುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರವಾಣಿ ಮೂಲಕ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಈ ಟ್ರಿನ್ ಟ್ರಿನ್ ಸೇವೆಯನ್ನು ಬಂದ್ ಮಾಡುವ ಅವಶ್ಯಕತೆ ಇರಲಿಲ್ಲ. ಆದರೂ ವಿದೇಶಿಗರು ಕೆಲವು ಸಲ ಉಪಯೋಗಿಸುವುದಿಲ್ಲ. ಆ ಭಾಗದಲ್ಲಿ ಟ್ರಿನ್ ಟ್ರಿನ್ ಸೇವೆಗೆ ನಿರ್ಬಂಧ ಹೇರಿರುವುದು ಸರಿಯಲ್ಲ ಎನ್ನುತ್ತಾರೆ ಪ್ರವಾಸಿ ವಿನಯ್.