ಕರ್ನಾಟಕ

karnataka

ETV Bharat / state

ಅರಮನೆ ನಗರಿ ದೇವಾಲಯಗಳನ್ನು ಬಂದ್ ಮಾಡುವಂತೆ ಆದೇಶ - ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ

ಕೊರೊನಾ ವೈರಸ್​ ಹರಡುವ ಭೀತಿ ಹಿನ್ನೆಲೆ ಅರಮನೆ ನಗರಿ ಮೈಸೂರಿನ ಎಲ್ಲಾ ದೇವಾಲಯಗಳನ್ನು ಬಂದ್​ ಮಾಡಲಾಗಿದೆ.

corona-effect-temple-closed-for-devotees-in-mysuru-until-next-notification, ಕೊರೊನಾ ಎಫೆಕ್ಟ್​​​: ಅರಮನೆ ನಗರಿ ದೇವಾಲಯಗಳನ್ನು ಬಂದ್ ಮಾಡುವಂತೆ ಆದೇಶ
ಕೊರೊನಾ ಎಫೆಕ್ಟ್​​​: ಅರಮನೆ ನಗರಿ ದೇವಾಲಯಗಳನ್ನು ಬಂದ್ ಮಾಡುವಂತೆ ಆದೇಶ

By

Published : Mar 21, 2020, 12:36 PM IST

ಮೈಸೂರು:ರಾಜ್ಯದಲ್ಲಿ ಕೊವಿಡ್-19 ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚೆತ್ತಿರುವ ಮೈಸೂರು ಜಿಲ್ಲಾಡಳಿತ ಕೊರೊನಾ ವಿರುದ್ಧ ಜಾಗೃತಿಗೆ ಮುಂದಾಗಿದೆ. ಜಿಲ್ಲೆಯಾದ್ಯಂತ ದೇವಾಲಯಗಳನ್ನು ಬಂದ್ ಮಾಡಲು ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.

ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳ ಹಿತದೃಷ್ಠಿಯಿಂದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳನ್ನು ಬಂದ್​ ಮಾಡುವಂತೆ ಆದೇಶಿಸಲಾಗಿದೆ. ಇನ್ನು ದೇವಾಲಯದಲ್ಲಿ ನಡೆಸುವ ದಿನನಿತ್ಯದ ಪೂಜಾ ಕಾರ್ಯಗಳನ್ನು ಅರ್ಚಕರು, ತಂತ್ರಿಗಳು, ದೇವಾಲಯ ಸಿಬ್ಬಂದಿ ಮಾತ್ರ ನಡೆಸಬಹುದಾಗಿದೆ.

ದೇವಾಲಯಗಳಲ್ಲಿ ನಡೆಯುವ ಎಲ್ಲಾ ಸೇವೆಗಳು, ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವ, ಪ್ರಸಾದ, ದಾಸೋಹ, ತೀರ್ಥ ವಿತರಣೆ, ದೇವರ ದರ್ಶನ ಹಾಗೂ ಇತರೆ ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ದೇವಾಲಯಗಳಲ್ಲಿನ ವಸತಿಗೃಹ, ಅತಿಥಿಗೃಹಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡುವುದನ್ನು ಮಾಚ್ 20ರಿಂದ ಮುಂದಿನ ಆದೇಶದ ವರೆಗೆ ರದ್ದುಪಡಿಸಲಾಗಿದೆ.

ದೇವಾಲಯಗಳಲ್ಲಿ ಈಗಾಗಲೇ ಪ್ರಾರಂಭವಾಗಿರುವ ಜಾತ್ರಾ ಉತ್ಸವ, ರಥೋತ್ಸವಗಳನ್ನು ದೇವಾಲಯದ ಆವರಣ, ಒಳಪ್ರಕಾರದೊಳಗೆ ಉತ್ಸವ ದಿನಗಳಲ್ಲಿ ಜನಸಂದಣಿ ಇಲ್ಲದಂತೆ ಕೈಗೊಳ್ಳಲು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details