ಕರ್ನಾಟಕ

karnataka

By

Published : Mar 10, 2020, 7:27 PM IST

ETV Bharat / state

ಕೊರೊನಾ ವೈರಸ್ ಭೀತಿ... ಮೈಸೂರು ಪ್ರವಾಸೋದ್ಯಮ ಪಾತಾಳಕ್ಕೆ

ಕೊರೊನಾ ವೈರಸ್​​ ಹರಡುವಿಕೆ ಭಯದಿಂದ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು,ಇದು ನೇರವಾಗಿ ಹೋಟೆಲ್​​ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ.

corona-effect-on-mysore-tourisum
ಪ್ರವಾಸೋದ್ಯಮದ ಮೇಲೆ ಕೊರೊನ ಕರಿನೆರಳು

ಮೈಸೂರು:ವಿಶ್ವದೆಲ್ಲೆಡೆ ಕೊರೊನಾ ವೈರಸ್​​ ಭೀತಿ ಕಾಡುತ್ತಿದೆ. ಇದರ ನೇರ ದುಷ್ಪರಿಣಾಮ ಮೈಸೂರಿನ ಪ್ರವಾಸೋದ್ಯಮ ಮೇಲೆಯೂ ಬೀರಿದೆ.

ಪ್ರವಾಸೋದ್ಯಮದ ಮೇಲೆ ಕೊರೊನಾ ಕರಿನೆರಳು

ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ ಇಲ್ಲಿನ ಹೋಟೆಲ್, ಲಾಡ್ಜ್, ಪ್ರವಾಸಿ ಸ್ಥಳದ ಅಂಗಡಿಗಳು ಟ್ಯಾಕ್ಸಿಗಳು, ಆಟೋ ಚಾಲಕರು ಈಗ ಪ್ರವಾಸಿಗರಿಲ್ಲದೇ ಆತಂಕಗೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿದಿನ ಅಂದಾಜು 50 ಕೋಟಿ ನಷ್ಟ ಉಂಟಾಗುತ್ತಿದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹೇಳಿದ್ದಾರೆ.

ಏಪ್ರಿಲ್, ಮೇ ತಿಂಗಳಲ್ಲಿ ಪ್ರವಾಸಕ್ಕೆ ಬರುವ ಈ ಸಂದರ್ಭದಲ್ಲೇ ಹೋಟೆಲ್​​ ಬುಕ್ಕಿಂಗ್​​ ನಡೆಯುತ್ತಿತ್ತು. ಆದ್ರೆ ಕೊರೊನಾ ಆತಂಕ ಯಾವುದೇ ಹೋಟೆಲ್ ಗಳು ಬುಕ್ ಆಗಿಲ್ಲ. ಹೀಗಾಗಿ ಶೇ. 90 ರಷ್ಟು ಪ್ರವಾಸೋದ್ಯಮ ನೆಲ ಕಚ್ಚಿದೆ ಎನ್ನುತ್ತಾರೆ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಶಾಸ್ತ್ರಿ.

ABOUT THE AUTHOR

...view details