ಮೈಸೂರು:ಕೊರೋನಾ ಭೀತಿ ಹಿನ್ನೆಲೆ ಇಂದಿನಿಂದ ನಂಜನಗೂಡಿನ ಶ್ರೀ ಕಂಠೇಶ್ವರ ದೇವಸ್ಥಾನ ಬಂದ್ ಆಗಿದ್ದು, ಭಕ್ತಾದಿಗಳಿಲ್ಲದೇ ಅರ್ಚಕರು ಮೊಬೈಲ್ ಚಾಟಿಂಗ್ನಲ್ಲಿ ನಿರತರಾಗಿರುವ ವಿಡಿಯೋ ವೈರಲ್ ಆಗಿದೆ.
ದೇವರ ಅರ್ಚನೆಗೆ ಬೈಬೈ... ಮೊಬೈಲ್ ಸರ್ಚ್ ಇಂಜಿನ್ನಲ್ಲಿ ಬ್ಯೂಸಿಯೋ ಬ್ಯೂಸಿ - ನಂಜನಗೂಡಿನ ಶ್ರೀ ಕಂಠೇಶ್ವರ ದೇವಸ್ಥಾನ
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ ನಂಜನಗೂಡಿನ ಶ್ರೀ ಕಂಠೇಶ್ವರ ದೇವಸ್ಥಾನ ಬಂದ್ ಆಗಿದೆ. ಸದ್ಯ ಭಕ್ತಾದಿಗಳಿಲ್ಲದೇ ಬಿಕೋ ಎನ್ನುತ್ತಿರುವ ದೇವಸ್ಥಾನದಲ್ಲಿ ಅರ್ಚಕರು ಮೊಬೈಲ್ ಚಾಟಿಂಗ್ ಮಾಡುತ್ತಾ ಕಾಲಕಳೆಯುತ್ತಿದ್ದಾರೆ.
ಮೊಬೈಲ್ ಚಾಟಿಂಗ್ನಲ್ಲಿ ನಿರತರಾದ ಅರ್ಚಕರು
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ದಕ್ಷಿಣ ಕಾಶಿ ಶ್ರೀ ಕಂಠೇಶ್ವರ ದೇವಸ್ಥಾನವನ್ನು ಬಂದ್ ಮಾಡಲಾಗಿದ್ದು, ಇಂದಿನಿಂದ ಮಾರ್ಚ್ 31ರ ವರೆಗೂ ಭಕ್ತರಿಗೆ ಪ್ರವೇಶವಿಲ್ಲ. ಆದರೆ, ದೇವಾಲಯದಲ್ಲಿ ಎಂದಿನಂತೆ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಪೂಜಾ ಕಾರ್ಯಗಳು ಮುಗಿದ ನಂತರ ಅರ್ಚಕರು ಮೊಬೈಲ್ ಚಾಟಿಂಗ್ ಕಾರ್ಯದಲ್ಲಿ ನಿರತರಾಗಿದ್ದು, ದೇವಾಲಯದ ಆವರಣ ಬಿಕೋ ಎನ್ನುತಿದೆ.
ಇಂದು ದೇವಸ್ಥಾನಕ್ಕೆ ಬಂದ ಭಕ್ತರಿಗೆ ಒಳಗೆ ಪ್ರವೇಶಿಸಲು ದೇವಸ್ಥಾನದ ಆಡಳಿತ ಮಂಡಳಿ ಬಿಡದ ಕಾರಣ ಭಕ್ತರು ದೇವಾಲಯದ ಹೊರಗೆ ನಿಂತು ಪೂಜಾ ಕಾರ್ಯ ನಡೆಸಿ ಹಿಂತಿರುಗಿದರು.