ಮೈಸೂರು: ಕೊರೊನಾ ಹಿನ್ನೆಲೆ ಅರಣ್ಯ ಇಲಾಖೆ ದಸರಾ ಗಜಪಡೆ ಆಯ್ಕೆ ಕಾರ್ಯವನ್ನು ಕೈ ಬಿಟ್ಟಿದೆ.
ಕೊರೊನಾ ಕರಿನೆರಳು: ದಸರಾ ಗಜಪಡೆ ಆಯ್ಕೆಗೂ ಬ್ರೇಕ್!
ಪ್ರತಿವರ್ಷ ಅರಣ್ಯ ಇಲಾಖೆ ದಸರಾ ಆನೆಗಳನ್ನು ಜುಲೈ ಅಂತ್ಯದೊಳಗೆ ಆಯ್ಕೆ ಮಾಡಿ ಬೆಂಗಳೂರಿನಲ್ಲಿರುವ ಪ್ರಧಾನ ಅರಣ್ಯ ಇಲಾಖೆಗೆ ಕಳುಹಿಸುತ್ತಿತ್ತು. ಆದರೆ, ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಈಗಾಲೇ ನಾಡನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಈ ಬಾರಿ ದಸರಾ ಅದ್ಧೂರಿಯಾಗಿ ನಡೆಯುವುದೇ ಸಂಶಯವಾಗಿದೆ.
ಪ್ರತಿವರ್ಷ ಅರಣ್ಯ ಇಲಾಖೆ ದಸರಾ ಆನೆಗಳನ್ನು ಜುಲೈ ಅಂತ್ಯದೊಳಗೆ ಆಯ್ಕೆ ಮಾಡಿ ಬೆಂಗಳೂರಿನಲ್ಲಿರುವ ಪ್ರಧಾನ ಅರಣ್ಯ ಇಲಾಖೆಗೆ ಕಳುಹಿಸುತ್ತಿತ್ತು. ಆದರೆ, ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಈಗಾಗಲೇ ನಾಡನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಈ ಬಾರಿ ದಸರಾ ಅದ್ಧೂರಿಯಾಗಿ ನಡೆಯುವುದೇ ಸಂಶಯವಾಗಿದೆ.
ಪ್ರತೀ ಬಾರಿಯಂತೆ ಅದ್ಧೂರಿ ದಸರಾ ಆಚರಿಸುವ ಬದಲು ಅರಮನೆಯ ಅಂಗಳದಲ್ಲಿಯೇ ಸಾಂಪ್ರದಾಯಿಕವಾಗಿ ದಸರಾ ನಡೆಯಲಿದೆ. ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಪ್ರತಿವರ್ಷ 14 ಆನೆಗಳ ತಂಡ ಗಜಪಯಣಕ್ಕೆ ಸಿದ್ಧತೆಗೊಳ್ಳಬೇಕಾಗಿತ್ತು. ಆದರೆ, ಈ ಬಾರಿ ಸರಳ ದಸರಾವನ್ನು ಕಣ್ತುಂಬಿಕೊಂಡು ತೃಪ್ತಿಪಡಬೇಕಾಗಿದೆ.