ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಕೊರೊನಾ ಕರ್ಫ್ಯೂ ಉಲ್ಲಂಘಿಸಿದ್ದಕ್ಕೆ 303 ವಾಹನಗಳು ಸೀಜ್ - Corona Curfew Violation in Mysore

ಮೈಸೂರಿನಲ್ಲಿ ಅನಾವಶ್ಯಕವಾಗಿ ಸುತ್ತುತ್ತಿದ್ದ 303 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇಂದು ಸಂಜೆ 5 ಗಂಟೆಯೊಳಗೆ ಸಮಜಾಯಿಷಿ ನೀಡದಿದ್ದರೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಡಿಸಿಪಿ ಡಾ. ಎ.ಎನ್‌. ಪ್ರಕಾಶ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Corona Curfew Violation in Mysore .... 303 Vehicles Siege
ಮೈಸೂರಲ್ಲಿ ಕೊರೊನಾ ಕರ್ಫ್ಯೂ ಉಲ್ಲಂಘನೆ....303 ವಾಹನಗಳು ಸೀಜ್

By

Published : Mar 31, 2020, 9:21 AM IST

ಮೈಸೂರು: ಕೋವಿಡ್-19 ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ನಗರದಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 303 ವಾಹನಗಳನ್ನು ಸೀಜ್ ಮಾಡಲಾಗಿದೆ.

ಎನ್.ಆರ್. ವಿಭಾಗದಲ್ಲಿ 121, ದೇವರಾಜ ವಿಭಾಗದಲ್ಲಿ 36, ಕೆ.ಆರ್. ವಿಭಾಗದಲ್ಲಿ 58, ಸಂಚಾರ ವಿಭಾಗದಲ್ಲಿ 70 ಒಟ್ಟು 285 ಬೈಕ್, 8 ಕಾರುಗಳು, 10 ಆಟೋಗಳು ಸೇರಿ ಒಟ್ಟಾರೆ 303 ವಾಹನಗಳನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ.

ಮೈಸೂರಲ್ಲಿ ಕೊರೊನಾ ಕರ್ಫ್ಯೂ ಉಲ್ಲಂಘನೆ....303 ವಾಹನಗಳು ಸೀಜ್

ಅಲ್ಲದೇ ಕರ್ಫ್ಯೂ ನಿಯಮ ಉಲ್ಲಂಘಿಸಿದ ಐವರು ಕಾರು ಚಾಲಕರಿಗೆ ಸಿಸಿಟಿವಿ ಪರಿಶೀಲಿಸಿ ನೋಟಿಸ್ ನೀಡಲಾಗಿದ್ದು, ಮಂಗಳವಾರ ಸಂಜೆ 5 ಗಂಟೆಯೊಳಗೆ ಸಮಜಾಯಿಷಿ ನೀಡದಿದ್ದರೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಡಿಸಿಪಿ ಡಾ. ಎ.ಎನ್‌. ಪ್ರಕಾಶ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಲ್ಲಿ ಕೊರೊನಾ ಕರ್ಫ್ಯೂ ಉಲ್ಲಂಘನೆ....303 ವಾಹನಗಳು ಸೀಜ್

ABOUT THE AUTHOR

...view details