ಕರ್ನಾಟಕ

karnataka

ETV Bharat / state

ತಿ.ನರಸೀಪುರ ಠಾಣೆಯ ಮತ್ತೊಬ್ಬ ಕಾನ್ಸ್‌ಟೇಬಲ್​​​ಗೂ ಕೊರೊನಾ ದೃಢ - T narasipura covid cases

ತಿ.ನರಸೀಪುರ ತಾಲೂಕಿನ ಕೊರೊನಾ ಸೋಂಕಿತ ಕಾನ್ಸ್‌ಟೇಬಲ್ ಸಂಪರ್ಕದಲ್ಲಿದ್ದ ಮತ್ತೊಬ್ಬ ಕಾನ್ಸ್‌ಟೇಬಲ್ ಗೂ ಕೊರೊನಾ ಸೋಂಕು ದೃಢಪಟ್ಟಿದೆ.

Mysure
Mysure

By

Published : Jul 4, 2020, 10:01 AM IST

ಮೈಸೂರು: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮುಂದುವರೆಸಿದೆ. ತಿ.ನರಸೀಪುರ ತಾಲೂಕಿನ ಕೊರೊನಾ ಸೋಂಕಿತ ಕಾನ್ಸ್‌ಟೇಬಲ್ ಸಂಪರ್ಕದಲ್ಲಿದ್ದ ಮತ್ತೊಬ್ಬ ಕಾನ್ಸ್‌ಟೇಬಲ್​​​​​ಗೂ ಕೊರೊನಾ ಸೋಂಕು ದೃಢಪಟ್ಟಿದೆ.

ನರಸೀಪುರ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್‌ಟೇಬಲ್​​​​ಗಳಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ನಲ್ಲಿರುವ ಸಿಬ್ಬಂದಿಗೆ ಆತಂಕ ಮನೆಮಾಡಿದೆ.

ಇನ್ನು ಈಗಾಗಲೇ ಕೊರೊನಾ ಸೋಂಕಿತ ಕಾನ್ಸ್‌ಟೇಬಲ್ ಅನ್ನು ಕೋವಿಡ್ 19 ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರು ನಗರ ಬಿಟ್ಟರೆ ತಿ.ನರಸೀಪುರ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ತಾಲೂಕಿನ ಜನತೆಯ ಎದೆಬಡಿತ ಹೆಚ್ಚಿಸಿದೆ.

ABOUT THE AUTHOR

...view details