ಕರ್ನಾಟಕ

karnataka

ETV Bharat / state

ಮೈಸೂರು ಕೋರ್ಟ್ ಸಿಬ್ಬಂದಿಗೆ ಕೊರೊನಾ: ಇಂದಿನ‌ ಕಲಾಪ ರದ್ದು - Mysure covid cases

ಮೈಸೂರಿನ ಹಳೆ ನ್ಯಾಯಾಲಯ‌ದ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಇಂದು ನ್ಯಾಯಾಲಯದಲ್ಲಿ ನಡೆಯಲಿರುವ ಎಲ್ಲಾ ಕಲಾಪಗಳನ್ನು ರದ್ದುಗೊಳಿಸಲಾಗಿದೆ.

ಕೋರ್ಟ್ ಸಿಬ್ಬಂದಿಗೆ ಕೊರೊನಾ  ಇಂದಿನ‌ ಮೈಸೂರು ಕೋರ್ಟ್ ಕಲಾಪ ರದ್ದು  Corona confirm to the mysure court staff  Mysure covid cases  Mysure court latest news
ಮೈಸೂರು ಕೋರ್ಟ್ ಸಿಬ್ಬಂದಿಗೆ ಕೊರೊನಾ

By

Published : Aug 13, 2020, 12:30 PM IST

Updated : Aug 13, 2020, 12:39 PM IST

ಮೈಸೂರು: ರಾಜ್ಯದಲ್ಲಿ ಕೋವಿಡ್ ವೈರಸ್ ಅಟ್ಟಹಾಸ ಮುಂದುವರೆದಿದೆ. ಇಲ್ಲಿನ ಕೋರ್ಟ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ಕೋರ್ಟ್ ಕಲಾಪ ರದ್ದುಪಡಿಸಲಾಗಿದೆ.

ಮೈಸೂರಿನ ಹಳೆ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದಲ್ಲಿ ನಡೆಯಲಿರುವ ಎಲ್ಲಾ ಕಲಾಪಗಳನ್ನು ರದ್ದುಗೊಳಿಸಲಾಗಿದೆ.

ಜೊತೆಗೆ ಕೋರ್ಟ್ ಗೆ ಸ್ಯಾನಿಟೈಸರ್ ಸಿಂಪಡಿಸುವ ಉದ್ದೇಶದಿಂದ ಕೋರ್ಟ್ ಕಲಾಪಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಹಾಗೂ ಹೊಸ ನ್ಯಾಯಾಲಯದಲ್ಲಿ ಎಂದಿನಂತೆ ಕಲಾಪಗಳು ನಡೆಯುತ್ತವೆ ಎಂದು ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ತಿಳಿಸಿದ್ದಾರೆ.

Last Updated : Aug 13, 2020, 12:39 PM IST

ABOUT THE AUTHOR

...view details