ಮೈಸೂರು: ತಿ.ನರಸೀಪುರ ಪುರಸಭೆ ಮುಖ್ಯಾಧಿಕಾರಿಗೆ ಕೊರೊನಾ ವಕ್ಕರಿಸಿದ್ದು, ಅಟೆಂಡರ್ ಕೊರೊನಾಗೆ ಬಲಿಯಾಗಿ ಮತ್ತೆ 16 ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ.
ತಿ.ನರಸೀಪುರ ಪುರಸಭೆ ಮುಖ್ಯಾಧಿಕಾರಿಗೆ ಕೊರೊನಾ: ಸೋಂಕಿಗೆ ಅಟೆಂಡರ್ ಬಲಿ - ಮೈಸೂರಿನ ತಿ.ನರಸೀಪುರ
ಮೈಸೂರು ಜಿಲ್ಲೆಯ ತಿ.ನರಸೀಪುರ ಪುರಸಭೆ ಮುಖ್ಯಾಧಿಕಾರಿಗೆ ಕೊರೊನಾ ಪಾಸಿಟಿವ್ ಬಂದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ತಿ.ನರಸೀಪುರ ಪುರಸಭೆ ಮುಖ್ಯಾಧಿಕಾರಿಗೆ ಕೊರೊನಾ
ಸೋಸಲೆ ಗ್ರಾಪಂ ಅಟೆಂಡರ್ ದೇವರಾಜ್ (48) ಮೃತ ದುರ್ದೈವಿ. ತಿ.ನರಸೀಪುರ ತಾಲೂಕಿನ ಸೋಸಲೆ 02, ತಲಕಾಡು 01, ಎಂ.ಕೆಬ್ಬೆಹುಂಡಿ 01, ಬೊಮ್ಮನಹಳ್ಳಿ 01, ತುಂಬಲ ಮತ್ತು ಬನ್ನೂರು ಪಟ್ಟಣದಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ.
ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 342ಕ್ಕೆ ಏರಿಕೆಯಾಗಿದ್ದು, ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 199ಕ್ಕೇರಿದೆ. 133 ಸಕ್ರಿಯ ಪ್ರಕರಣಗಳಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 10ಕ್ಕೇರಿದೆ.