ಮೈಸೂರು: ಲಾಡ್ಜ್ನಲ್ಲಿ ನಡೆಯುತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, 6 ಮಹಿಳೆಯರನ್ನು ರಕ್ಷಿಸಿದ್ದಾರೆ.
ಮೈಸೂರಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: 6 ಮಹಿಳೆಯರ ರಕ್ಷಣೆ, 7 ಮಂದಿ ವಶಕ್ಕೆ - ಮೈಸೂರಿನ ಹೆಬ್ಬಾಳು ಬಳಿ ವೇಶ್ಯಾವಾಟಿಕೆ
ಮೈಸೂರಿನಲ್ಲಿ ವೇಶ್ಯಾವಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, 6 ಮಹಿಳೆಯರನ್ನು ರಕ್ಷಿಸಿದ್ದಾರೆ.
ನಗರದ ಹೆಬ್ಬಾಳುವಿನ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ಹಾಗೂ ಒಡನಾಡಿ ಸೇವಾ ಸಂಸ್ಥೆಯವರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 6 ಮಹಿಳೆಯರನ್ನು ರಕ್ಷಿಸಿದ್ದು, ನಾಲ್ವರು ಪುರುಷರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಈ ಕಾನೂನು ಬಾಹಿರ ಚಟುವಟಿಕೆಗೆ ಸಹಾಯ ಮಾಡುತ್ತಿದ್ದ 3 ಜನ ಪುರುಷರನ್ನೂ ವಶಕ್ಕೆ ಪಡೆಯಲಾಗಿದೆ.
ಮಹಿಳೆಯರನ್ನು ಲಾಡ್ಜ್ಗೆ ಸೆಲ್ಲಾರ್ ಮೂಲಕ ಕರೆತಂದು ಅಲ್ಲಿಂದ ಲಿಫ್ಟ್ ಮೂಲಕ ರೂಂಗಳಿಗೆ ಕರೆದುಕೊಂಡು ಹೊಗಲಾಗ್ತಿತ್ತು. ಅದಕ್ಕೂ ಮುನ್ನ ಮಹಿಳೆಯರನ್ನು ಮತ್ತು ಗ್ರಾಹಕರನ್ನು ವಸತಿ ಗೃಹದ ಮುಂಭಾಗದ ಚಹಾ ಅಂಗಡಿಯ ಬಳಿ ಬರುವಂತೆ ತಿಳಿಸಲಾಗುತ್ತಿತ್ತಂತೆ. ಈ ಬಗ್ಗೆ ಮಾಹಿತಿ ಕಲೆಹಾಕಿದ ಒಡನಾಡಿ ಸಂಸ್ಥೆಯ ಸ್ಟಾಲಿನ್ ಮತ್ತು ಪರಶುರಾಮ್, ಈ ವಿಷಯವನ್ನು ಡಿಸಿಪಿ ಪ್ರಕಾಶ್ ಗೌಡರಿಗೆ ತಿಳಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಡಿಸಿಪಿ, ಪೊಲೀಸ್ ತಂಡ ರಚಿಸಿ ದಾಳಿ ನಡೆಸಿದ್ದಾರೆ. ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.