ಮೈಸೂರು: ಸಹಕಾರ ಕ್ಷೇತ್ರ ಸಾವಿರಾರು ಜನರಿಗೆ ಉದ್ಯೋಗ, ಲಕ್ಷಾಂತರ ರೈತರಿಗೆ ಸಾಲಸೌಲಭ್ಯ ನೀಡಲಾಗುತ್ತಿದೆ. ಎಲ್ಲಾ ವಲಯದಲ್ಲಿ ಸಹಕಾರ ಕ್ಷೇತ್ರ ಮುಂಚೂಣಿಯಲ್ಲಿದೆ. ಸಹಕಾರ ಇದ್ದರೆ ಮಾತ್ರ ಸಹಕಾರ ಸಂಘಗಳು ಯಶಸ್ವಿಯಾಗುತ್ತವೆ. ಸಹಕಾರ ಇಲಾಖೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದು, ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಈ ವರ್ಷ 33 ಲಕ್ಷ ರೈತರಿಗೆ ವಿಶೇಷವಾಗಿ 3 ಲಕ್ಷ ಹೊಸ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತರ ಸಾಲಮನ್ನಾಕ್ಕಾಗಿ 5700 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರು. ಅಲ್ಪಸ್ವಲ್ಪ ಸಾಲಮನ್ನಾ ಬಾಕಿಯಿದ್ದು ಡಿಸೆಂಬರ್ ಒಳಗೆ ಹಣ ಬಿಡುಗಡೆಯಾಗಲಿದೆ, 21 ಡಿಸಿಸಿ ಬ್ಯಾಂಕುಗಳು ಲಾಭದಲ್ಲಿವೆ. ರೈತರಿಗೆ ಸಾಲಸೌಲಭ್ಯ ಕಲ್ಪಿಸುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಾಲ ವಿತರಣೆ ಜೊತೆಗೆ ಸಾಲ ಮರುಪಾವತಿ ಕೂಡ ಉತ್ತಮವಾಗಿ ಆಗುತ್ತಿದೆ ಎಂದರು ತಿಳಿಸಿದರು.
ಯಶಸ್ವಿನಿ ಯೋಜನೆ: ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ, ಹೆಚ್.ವಿಶ್ವನಾಥ್ ಅವರು ಸಹಕಾರ ಸಚಿವರಾಗಿ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದರು. ಆದರೆ ಯಶಸ್ವಿನಿ ಯೋಜನೆ ತೆಗೆಯಲು ಕೆಲವರು ಉನ್ನಾರ ನಡೆಸಿದರು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಯಶಸ್ವಿನಿ ರದ್ದುಪಡಿಸದಂತೆ ಮನವಿ ಮಾಡಲಾಯಿತು. ಆದರೆ ಅಂದಿನ ಆರೋಗ್ಯ ಸಚಿವರು ಯಶಸ್ವಿನಿ ಯೋಜನೆ ರದ್ದು ಮಾಡಿದರು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಬಳಿಕ ಬಜೆಟ್ ನಲ್ಲಿ ಯೋಜನೆ ಘೋಷಿಸಿದರು.