ಮೈಸೂರು: ನಟ ದರ್ಶನ್ ಅವರಿಗೆ 25 ಕೋಟಿ ರೂ ಶೂರಿಟಿ ವಂಚನೆ ಪ್ರಕರಣದ ಆರೋಪಿ ಅರುಣ ಕುಮಾರಿ, ದರ್ಶನ್ ಫಾರಂ ಹೌಸ್‌ಗೆ ಬಂದಿದ್ದ ವೇಳೆ ತೆಗೆದಿದ್ದು ಎನ್ನಲಾದ ಸಣ್ಣ ವಿಡಿಯೋ ತುಣುಕು ಹಾಗೂ ಚಿತ್ರ ನಿರ್ಮಾಪಕ ಉಮಾಪತಿ ಜೊತೆ ನಡೆಸಿದ್ದರು ಎನ್ನಲಾದ ಚಾಟಿಂಗ್ ಹಾಗೂ ಆಡಿಯೋ ಭಾರಿ ಸದ್ದು ಮಾಡುತ್ತಿದೆ.
ಲಭ್ಯವಾಗಿರುವ ವಿಡಿಯೋದಲ್ಲಿರುವವರು ಅರುಣ ಕುಮಾರಿ ಹಾಗು ಆಕೆಯ ಸ್ನೇಹಿತರಾದ ಮಧುಕೇಶವ್ ಮತ್ತು ನಂದೀಶ್ ಎನ್ನಲಾಗುತ್ತಿದೆ.
ಕಳೆದ ಏಪ್ರಿಲ್ 8 ರಿಂದ ನಿರ್ಮಾಪಕ ಉಮಾಪತಿಗೆ ಅರುಣಕುಮಾರಿ ವಾಟ್ಸ್‌ಆ್ಯಪ್ ಮೂಲಕ ಚಾಟ್ ಮಾಡಿದ್ದಾರೆ. ಈ ವೇಳೆ ದರ್ಶನ್ ಅವರ ಆಧಾರ್ ಕಾರ್ಡ್ ಹಾಗು ವಿಳಾಸವನ್ನು ಉಮಾಪತಿ ಶೇರ್ ಮಾಡಿದ್ದರಂತೆ. ಇದನ್ನು ಯಾವ ಕಾರಣಕ್ಕೆ ಉಮಾಪತಿ ಹಂಚಿಕೊಂಡಿದ್ದರು ಎಂಬ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಇದಕ್ಕೆ ಸ್ವತ: ಉಮಾಪತಿಯವರೇ ಸ್ವಷ್ಟನೆ ನೀಡಬೇಕಿದೆ.
ಸದ್ಯ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.