ಮೈಸೂರು: ಕಳೆದ 6 ತಿಂಗಳಿಂದ ಸಂಬಳ ನೀಡಿಲ್ಲವೆಂದು ಕುಟುಂಬ ಸಮೇತ ಪ್ರತಿಭಟನೆ ನಡೆಸುತ್ತಿರುವ ಅರಣ್ಯ ಇಲಾಖೆ ಗುತ್ತಿಗೆ ನೌಕರ ಬೋರೇಗೌಡನ ವಿರುದ್ಧ ಡಿಸಿಎಫ್ ಡಾ. ಪ್ರಶಾಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುತ್ತಿಗೆ ನೌಕರರ ಬೋರೇಗೌಡನನ್ನ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಕೆಲಸದಿಂದ ತೆಗೆಯಲಾಗಿದೆ. ಕೆಲಸದಿಂದ ತೆಗೆಯುವ ಮುನ್ನ ಅರಣ್ಯ ಇಲಾಖೆ ಅವರಿಗೆ ನೀಡಬೇಕಾದ ಸಂಬಳವನ್ನು ನೀಡಿದೆ. ಇದಕ್ಕೆ ಅವರು ಚೆಕ್ ಪಡೆದಿರುವ ಸಹಿ ನಮ್ಮ ಬಳಿ ಇದೆ ಎಂದು ಸ್ಪಷ್ಟನೆ ನೀಡಿದರು.