ಕರ್ನಾಟಕ

karnataka

ETV Bharat / state

ಮೈಸೂರು ಮೃಗಾಲಯಕ್ಕೆ ತೆರಳುವ ಪ್ರವಾಸಿಗರಿಗೆ ಸಿಹಿ ಸುದ್ದಿ - ಮೃಗಾಲಯಕ್ಕೆ ಸುರಂಗ ಮಾರ್ಗ ನಿರ್ಮಾಣ

ಮೃಗಾಲಯದ ಮುಂದಿನ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ರಸ್ತೆ ದಾಟಿ ಮೃಗಾಲಯಕ್ಕೆ ಬರಲು ಜನರು ಹರಸಾಹಸ ಪಡುತ್ತಿದ್ದರು. ಈ ಹಿನ್ನೆಲೆ ಸುರಂಗ ಮಾರ್ಗ ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಿಕೊಡುವುದಲ್ಲದೆ, ಪ್ರವಾಸಿಗರಿಗೆ ಮುಕ್ತ ಸಂಚಾರಕ್ಕಾಗಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಮೈಸೂರು ಪ್ರವಾಸಿಗರಿಗೆ ಶುಭ ಸುದ್ದಿ
ಮೈಸೂರು ಪ್ರವಾಸಿಗರಿಗೆ ಶುಭ ಸುದ್ದಿ

By

Published : Feb 16, 2020, 4:25 PM IST

ಮೈಸೂರು: ಏಷ್ಯಾದಲ್ಲಿಯೇ ನಂಬರ್ ಒನ್ ಎಂದು ಖ್ಯಾತಿ ಗಳಿಸಿರುವ ಮೈಸೂರಿನ ಮೃಗಾಲಯಕ್ಕೆ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ‌.

ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯಕ್ಕೆ ದಿನದಿಂದ ದಿನಕ್ಕೆ ಪ್ರವಾಸಿಗರ ದಟ್ಟಣೆ ಹೆಚ್ಚಳವಾಗುತ್ತಿರುವುದರಿಂದ ಈ ನಿರ್ಧಾರ ಮಾಡಲಾಗಿದೆ. ಮೃಗಾಲಯ ಪ್ರವೇಶ ದ್ವಾರದ ಮುಂದೆ ವಿಶಾಲವಾದ ಪಾರ್ಕಿಂಗ್​ ಸ್ಥಳವಿದ್ದು, ಯಾರೇ ಪ್ರವಾಸಿಗರು ಬಂದರೂ ಇಲ್ಲಿ ವಾಹನಗಳನ್ನು ನಿಲ್ಲಿಸಿ ಪ್ರವೇಶ ದ್ವಾರದ ಮುಂದಿರುವ ರಸ್ತೆ ದಾಟಿ ಮೃಗಾಲಯಕ್ಕೆ ಹೋಗಬೇಕಿತ್ತು. ಈ ರಸ್ತೆಯಲ್ಲಿ ಮೈಸೂರಿನಿಂದ ನಂಜನಗೂಡು, ಗುಂಡ್ಲುಪೇಟೆ, ತಮಿಳುನಾಡು, ಊಟಿ, ಕೇರಳ, ಚಾಮರಾಜನಗರಕ್ಕೆ ಹೋಗುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ.

ಮೈಸೂರು ಮೃಗಾಲಯಕ್ಕೆ ತೆರಳುವ ಪ್ರವಾಸಿಗರಿಗೆ ಸಿಹಿ ಸುದ್ದಿ

ವಾಹನಗಳ ದಟ್ಟಣೆ ಮಧ್ಯೆ ರಸ್ತೆ ದಾಟಲು ಪ್ರವಾಸಿಗರು ಕಷ್ಟ ಪಡುತ್ತಿದ್ದರಿಂದ ಮೃಗಾಲಯದ ಮುಂಭಾಗದಲ್ಲಿ 1.75 ಕೋಟಿ ರೂ‌.ವೆಚ್ಚದಲ್ಲಿ 4X13 ಅಳತೆಯ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ABOUT THE AUTHOR

...view details