ಕರ್ನಾಟಕ

karnataka

ETV Bharat / state

ಪೊಲೀಸರನ್ನು ನಾಯಿಗೆ ಹೋಲಿಸಿದ್ದಾರಲ್ಲ, ಆರಗ ಜ್ಞಾನೇಂದ್ರರೇ ಇದು ಸರಿಯೇ?: ಎಂ.ಲಕ್ಷ್ಮಣ್ ವಾಗ್ದಾಳಿ

ತಮ್ಮ ಇಲಾಖೆಯ ಸಿಬ್ಬಂದಿಯನ್ನ ಎಂಜಲು ನಾಯಿಗೆ ಹೋಲಿಸುವುದು ಎಷ್ಟು ಸರಿ. ಈ ಆರಗ ಜ್ಞಾನೇಂದ್ರ ಹುಚ್ಚು ನಾಯಿ. ಪೊಲೀಸ್ ವ್ಯವಸ್ಥೆಯನ್ನ ಕುಗ್ಗಿಸುವುದಕ್ಕೆ ಮುಂದಾಗಿದ್ದಾರೆ ಎಂದು ಎಂ ಲಕ್ಷ್ಮಣ್ ಹರಿಹಾಯ್ದರು.

ಎಂ.ಲಕ್ಷ್ಮಣ್ ವಾಗ್ದಾಳಿ
ಎಂ.ಲಕ್ಷ್ಮಣ್ ವಾಗ್ದಾಳಿ

By

Published : Dec 4, 2021, 3:15 PM IST

ಮೈಸೂರು:ಆರಗ ಜ್ಞಾನೇಂದ್ರನಂತಹ ನಾಲಾಯಕ್ ಗೃಹಮಂತ್ರಿಯನ್ನ ರಾಜ್ಯ ಕಂಡಿರಲಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಗೃಹ ಮಂತ್ರಿ ಆರಗ ಜ್ಞಾನೇಂದ್ರ ವಿರುದ್ಧ ಎಂ.ಲಕ್ಷ್ಮಣ್ ವಾಗ್ದಾಳಿ

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸರನ್ನು ಎಂಜಲು ನಾಯಿಗಳು ಎಂದಿದ್ದಾರೆ. ಇವರಿಗೆ ಮಾನಾಮರ್ಯಾದೆ ಇದೆಯಾ. ಪೊಲೀಸ್ ವ್ಯವಸ್ಥೆಯನ್ನ ದುರ್ಬಳಕೆ ಮಾಡಿಕೊಂಡಿದ್ದೇ ಬಿಜೆಪಿ ಎಂದು ಟೀಕಿಸಿದರು.

ತಮ್ಮ ಇಲಾಖೆಯ ಸಿಬ್ಬಂದಿಯನ್ನ ಎಂಜಲು ನಾಯಿಗೆ ಹೋಲಿಸುವುದು ಎಷ್ಟು ಸರಿ. ಈ ಆರಗ ಜ್ಞಾನೇಂದ್ರ ಹುಚ್ಚು ನಾಯಿ. ಪೊಲೀಸ್ ವ್ಯವಸ್ಥೆಯನ್ನ ಕುಗ್ಗಿಸುವುದಕ್ಕೆ ಮುಂದಾಗಿದ್ದಾರೆ. ಎಲ್ಲ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ಮುಳುಗಿದೆ ಅನ್ನೋದು ಇದಕ್ಕೆ ಸಾಕ್ಷಿ‌‌ ಎಂದು ಹರಿಹಾಯ್ದರು.

ದೇಶದಲ್ಲಿ ಕರ್ನಾಟಕ ಪೊಲೀಸ್ ವ್ಯವಸ್ಥೆಗೆ ಉತ್ತಮವಾದ ಹೆಸರಿದೆ. ಕೂಡಲೇ ಮುಖ್ಯಮಂತ್ರಿ ಬೊಮ್ಮಾಯಿ ಗೃಹ ಸಚಿವರ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಇನ್ನಿಲ್ಲ

ABOUT THE AUTHOR

...view details