ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ಗೆ ಗಜೇಂದ್ರ ಮೋಕ್ಷ ಸಿಕ್ಕಿದೆ: ಭಾರತ್​ ಜೋಡೋ ಯಾತ್ರೆ ಬಗ್ಗೆ ಸಂಸದರ ಲೇವಡಿ

ನನ್ನ ಸಂಸತ್ ಸ್ಥಾನದ ಅವಧಿ ಮುಗಿದ ನಂತರ ರಾಜಕೀಯ ನಿವೃತ್ತಿಯ ಘೋಷಣೆ ಮಾಡಿದ್ದೇನೆ. ನನ್ನ ರಾಜಕೀಯ ನಿವೃತ್ತಿ ಬಳಿಕ ನನ್ನ ಮಕ್ಕಳು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸಂಸದ ವಿ ಶ್ರೀನಿವಾಸ ಪ್ರಸಾದ್ ಸ್ಪಷ್ಟನೆ ನೀಡಿದರು.

MP Srinivasa Prasad
ಸಂಸದ ಶ್ರೀನಿವಾಸ ಪ್ರಸಾದ್

By

Published : Oct 17, 2022, 9:09 PM IST

ಮೈಸೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 22 ವರ್ಷಗಳ ಸುದೀರ್ಘ ಅವಧಿಯ ನಂತರ ಚುನಾವಣೆ ನಡೆದಿದೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಗಜೇಂದ್ರ ಮೋಕ್ಷ ಸಿಕ್ಕಂತಾಗಿದೆ ಎಂದು ಸಂಸದ ವಿ ಶ್ರೀನಿವಾಸ ಪ್ರಸಾದ್ ಲೇವಡಿ ಮಾಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ವಿ ಶ್ರೀನಿವಾಸ್ ಪ್ರಸಾದ್, ಈ ಕುರಿತು ಪುರಾಣ ಕತೆಯಲ್ಲಿ ಉಲ್ಲೇಖವಿದೆ. ಆನೆ ನೀರು ಕುಡಿಯಲು ಕೆರೆಯ ಬಳಿ ಹೋದಾಗ ಮೊಸಳೆ ಆನೆಯ ಕಾಲು ಹಿಡಿದುಕೊಳ್ಳುತ್ತದೆ. ಆಗ ವಿಷ್ಣು ಚಕ್ರವನ್ನು ಪ್ರಯೋಗಿಸಿದಾಗ ಮೊಸಳೆಯಿಂದ ಆನೆಗೆ ಮುಕ್ತಿ ಸಿಗುತ್ತದೆ. ಅದೇ ರೀತಿ ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ 22 ವರ್ಷಗಳ ನಂತರ ಮೋಕ್ಷ ಸಿಕ್ಕಿದೆ ಎಂದು ಹೇಳಿಕೆ ನೀಡಿದರು.

ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಬಗ್ಗೆ ಮೊದಲೇ ಹೇಳಿದ್ದೇನೆ. ಕನ್ನಡದ ಗಾದೆಯಂತೆ ರಾಜ್ಯವನ್ನೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಿದೆ. ಇದು ರಾಹುಲ್ ಗಾಂಧಿ ಯಾತ್ರೆಯಾಗಿದೆ. ದೇಶದೆಲ್ಲೆಡೆ ಸೋತು ಸುಣ್ಣವಾಗಿ, ಕಾಂಗ್ರೆಸ್ ಹೆಸರೇ ಇಲ್ಲದಿರುವಾಗ ಜೋಡೋ ಮಾಡುತ್ತಿರುವುದು ಹಾಸ್ಯಾಸ್ಪದ. ಇದು ಎಲ್ಲವನ್ನೂ ಲೂಟಿ ಮಾಡಿದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ರಾಹುಲ್ ಗಾಂಧಿ ಯಾತ್ರೆ ಮಾಡುತ್ತಿದ್ದಾರೆಂದು ಟೀಕಿಸಿದರು.

ಸಂಸದ ಶ್ರೀನಿವಾಸ ಪ್ರಸಾದ್ ಸುದ್ದಿಗಾರರೊಂದಿಗೆ ಮಾತನಾಡಿದರು

ರಾಜಕೀಯ ನಿವೃತ್ತಿ:ಮುಂದಿನ ಚುನಾವಣೆಯಲ್ಲಿ ಭಾಗಿಯಾಗುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಒಂದೂವರೆ ವರ್ಷ ಕಳೆದರೆ ನಾನು ರಾಜಕೀಯಕ್ಕೆ ಬಂದು 50 ವರ್ಷವಾಗಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲೇ ಸ್ಪರ್ಧಿಸುವ ಇಚ್ಛೆ ಇರಲಿಲ್ಲ. ಆದರೆ ಕ್ಷೇತ್ರದ ಮತದಾರರು ಕಡೆಯ ಚುನಾವಣೆಯಲ್ಲಿ ಗೆದ್ದು ಅವಧಿ ಮುಗಿದ ಬಳಿಕ ನಿವೃತ್ತಿಯಾಗಿ ಎಂದಿದ್ದರು. ಹಾಗಾಗಿ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿದೆ ಅಷ್ಟೇ.

ಈಗ ನನ್ನ ಆರೋಗ್ಯ ಸರಿಯಿಲ್ಲ, ನನಗೀಗ ಹೆಚ್ಚು ಸಮಯ ನಿಲ್ಲಲಾಗುವುದಿಲ್ಲ. ಹಾಗಾಗಿ ನನ್ನ ಸಂಸತ್ ಸ್ಥಾನದ ಅವಧಿ ಮುಗಿದ ನಂತರ ರಾಜಕೀಯ ನಿವೃತ್ತಿಯ ಘೋಷಣೆ ಮಾಡಿದ್ದೇನೆ. ನನ್ನ ರಾಜಕೀಯ ನಿವೃತ್ತಿ ಬಳಿಕ ನನ್ನ ಮಕ್ಕಳು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸಂಸದರು ಸ್ಪಷ್ಟನೆ ನೀಡಿದರು.

ಮೀಸಲಾತಿ ಹೆಚ್ಚಳ ವಿಚಾರ:ಮೀಸಲಾತಿ ಬಗ್ಗೆ ಬಿಡಿಸಿ ಹೇಳಿದರೆ ಅದರ ಕಥೆಯೇ ಬೇರೆಯಾಗುತ್ತದೆ. ನಾವು ರಾಜಕಾರಣಿಗಳು ಏನು ಬೇಕಾದರೂ ಮಾಡುತ್ತೇವೆ. ಸ್ವಾಮೀಜಿ ಉಪವಾಸ ಮಾಡಿದರು ಅಂತ ಮೀಸಲಾತಿ ಪ್ರಕಟಿಸಿಬಿಟ್ಟರು. ನಾನು ಕೇಂದ್ರದಲ್ಲಿ ಇದ್ದವನು ಸಂವಿಧಾನ ನೋಡಿ ಮಾತನಾಡುವವನು, ಈಗ ಮಾತನಾಡಿದರೆ ವಿವಾದ ಆಗುತ್ತೆ. ಸವಿವರವಾಗಿ ಮಾತನಾಡಿದರೆ ಬೇರೆ ಕಥೆ ಆಗುತ್ತೆ. ಏನೂ ಮಾತನಾಡಲು ಆಗದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದೇನೆ ಎಂದು ಮೀಸಲಾತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಮೀಸಲಾತಿಯ ಬಗ್ಗೆ ಇಕ್ಕಟ್ಟಿನ ಸಂದರ್ಭವನ್ನು ವಿವರಿಸಲು ನಿರಾಕರಿಸಿದರು.

ಇದನ್ನೂ ಓದಿ:ಹಳೆ ಮಾಹಿತಿಯನ್ನೇ ಕಾಪಿ ಪೇಸ್ಟ್ ಮಾಡಿ ತಂದ ಸಿಇಒಗಳಿಗೆ ಚಳಿ ಬಿಡಿಸಿದ ಸಿಎಂ

ABOUT THE AUTHOR

...view details