ಕರ್ನಾಟಕ

karnataka

ETV Bharat / state

ದೇಗುಲದಲ್ಲಿ ಬಿಜೆಪಿ ಶಲ್ಯ ಇಟ್ಟು ಪೂಜೆ: ಪ್ರತಾಪ್​ ಸಿಂಹ ವಿರುದ್ಧ ಚುನಾವಣಾಧಿಕಾರಿಗೆ ಕಾಂಗ್ರೆಸ್ ದೂರು - ಕಾಂಗ್ರೆಸ್

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್​ ಸಿಂಹ ಅವರು ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರ ವೇಳೆ ಸಿದ್ದಲಿಂಗಪುರ ಗ್ರಾಮದ ದೇವಾಲಯದಲ್ಲಿ ಬಿಜೆಪಿ ಪತಾಕೆ ಹಾರಿಸಿದ್ದಾರೆಂದು ಕಾಂಗ್ರೆಸ್​ ದೂರು ನೀಡಿದೆ.

ಪ್ರತಾಪ್​ ಸಿಂಹ ವಿರುದ್ಧ ಕಾಂಗ್ರೆಸ್ ದೂರು

By

Published : Mar 28, 2019, 9:02 PM IST

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್​ ಸಿಂಹ ಅವರ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ.

ಪ್ರತಾಪ್​ ಸಿಂಹ ವಿರುದ್ಧ ಕಾಂಗ್ರೆಸ್ ದೂರು

ಬಿಜೆಪಿ ಅಭ್ಯರ್ಥಿ ಪ್ರತಾಪ್​ ಸಿಂಹ ಅವರು ಇಂದು ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರ ವೇಳೆ ಸಿದ್ದಲಿಂಗಪುರ ಗ್ರಾಮದ ದೇವಾಲಯದಲ್ಲಿ ದೇವಸ್ಥಾನ ಗರ್ಭಗುಡಿಯ ಪ್ರಭಾವಳಿಗೆ ಬಿಜೆಪಿ ಶಲ್ಯ ಇಟ್ಟು ಪೂಜೆ ಮಾಡಿದ್ದರು.

ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್ , ನಗರಾಧ್ಯಕ್ಷ ಮೂರ್ತಿ ಸೇರಿದಂತೆ ಮುಖಂಡರು ದೂರು ನೀಡಿದ್ದಾರೆ.ಅವರನ್ನುನಾಳೆ ಅನರ್ಹಗೊಳಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹೇಳಿದ್ದಾರೆ‌.

ABOUT THE AUTHOR

...view details