ಮೈಸೂರು:ಮಹಾನಗರ ಪಾಲಿಕೆ ವಾರ್ಡ್ ನಂಬರ್ 36ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಭರ್ಜರಿ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ವಿರುದ್ಧ ಬರೋಬ್ಬರಿ 1,997 ಮತಗಳ ಭಾರಿ ಅಂತರದಿಂದ ಜಯ ಗಳಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಲೀಲಾವತಿ ಮಹೇಶ್ ರಜಿನಿ ಅಣ್ಣಯ್ಯ 4,113 ಮತ ಗಳಿಸಿದರೆ, ಜೆಡಿಎಸ್ ಅಭ್ಯರ್ಥಿ ಲೀಲಾವತಿ ಮಹೇಶ್‌ಗೆ 2,116 ಮತ ಹಾಗೂ ಬಿಜೆಪಿ ಅಭ್ಯರ್ಥಿ ಶೋಭಾ ರಮೇಶ್ ಕೇವಲ 601 ಮತಗಳು ಲಭಿಸಿವೆ. 66 ನೋಟಾ ಮತದಾನವಾಗಿದೆ.
ಬಿಜೆಪಿ ಅಭ್ಯರ್ಥಿ ಶೋಭಾ ರಮೇಶ್ ಜೆಡಿಎಸ್ ಅಭ್ಯರ್ಥಿ, ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ನಡೆದ ಚುನಾವಣೆ ಇದಾಗಿದ್ದು, ಜೆಡಿಎಸ್ ಹೀನಾಯ ಸೋಲುಂಡಿದೆ. ಜಿ.ಟಿ.ದೇವೇಗೌಡ ಟ್ರಂಪ್ ಕಾರ್ಡ್ ಕಾಂಗ್ರೆಸ್ಗೆ ವರದಾನವಾದರೆ, ಸಾರಾ ಮಹೇಶ್ ಸೇರಿದಂತೆ ದಳಪತಿಗಳಿಗೆ ಮುಖಭಂಗವಾಗಿದೆ. ಈ ಮೂಲಕ ಕಾಂಗ್ರೆಸ್ ಮೇಯರ್ ಚುನಾವಣೆಯ ಸೇಡು ತೀರಿಸಿಕೊಂಡಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ MES ಗೆ ತೀವ್ರ ಮುಖಭಂಗ.. ಬಿಜೆಪಿಗೆ ತೆಕ್ಕೆಗೆ ಕುಂದಾನಗರಿ