ಮೈಸೂರು: ರಾಜ್ಯ ಮಟ್ಟದಲ್ಲಿ ತೆಗೆದುಕೊಳ್ಳುವ ತೀರ್ಮಾನ ರಾಜ್ಯ ಮಟ್ಟಕ್ಕೆ ಸೀಮಿತ. ನಗರದ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯವಾಗಿ ತೆಗೆದುಕೊಂಡ ತೀರ್ಮಾನ ಸ್ಥಳೀಯರಿಗೆ ಸೀಮಿತ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಸೆಡ್ಡು ಹೊಡೆಯಲು ಶಾಸಕ ತನ್ವೀರ್ ಸೇಠ್ ಮುಂದಾಗಿದ್ದಾರೆ.
ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುಂದುವರೆಯುತ್ತೆ: ಸಿದ್ದುಗೆ ತನ್ವೀರ್ ಸೇಠ್ ಸೆಡ್ಡು - Congress, JDS alliance in Mysore
ಸ್ಥಳೀಯವಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಮುಂದುವರೆಯುತ್ತೆ. ಶಾಸಕ ಸಾ.ರಾ ಮಹೇಶ್ ಅವರ ಪಕ್ಷದ ನಗರ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ. ಮುಂದೆ ಕಾದು ನೋಡಿ ಎಂದು ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
![ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುಂದುವರೆಯುತ್ತೆ: ಸಿದ್ದುಗೆ ತನ್ವೀರ್ ಸೇಠ್ ಸೆಡ್ಡು MLA Tanveer Seth](https://etvbharatimages.akamaized.net/etvbharat/prod-images/768-512-10620326-thumbnail-3x2-vis.jpg)
ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವಾಗಿ,ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಮೇಯರ್ ಚುನಾವಣೆಗೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ರಾಜ್ಯ ಮಟ್ಟದಲ್ಲಿನ ತೀರ್ಮಾನ ಅಲ್ಲ. ಸ್ಥಳೀಯ ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ತೆಗೆದುಕೊಳ್ಳುತ್ತಾರೆ. ಹಿಂದೆ ಮೇಯರ್ ಚುನಾವಣೆ ನಡೆದಾಗ ಕೃಷ್ಣಬೈರೇಗೌಡ ವೀಕ್ಷಕರಾಗಿ ಬಂದಿದ್ರು. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿದಿದೆ ಎಂದರು.
ಅದೇ ರೀತಿ ಶಾಸಕ ಸಾ ರಾ ಮಹೇಶ್ ಮಹೇಶ್ ಮತ್ತು ನಾನು ಒಪ್ಪಂದ ಮಾಡಿಕೊಂಡಿದ್ದೇವೆ. ಮೈತ್ರಿ ಮುಂದುವರೆಯುವ ವಿಶ್ವಾಸ ನನಗೆ ಇದೆ. ಐದು ವರ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಪ್ಪಂದವಾಗಿತ್ತು. ನಮ್ಮ ಪಕ್ಷದ ನಗರಾಧ್ಯಕ್ಷರು ಹಾಗೂ ಜೆಡಿಎಸ್ ನಗರಾಧ್ಯಕ್ಷರ ಉಪಸ್ಥಿತಿಯಲ್ಲಿ ಒಪ್ಪಂದವಾಗಿದ್ದು, ಮೈತ್ರಿ ಮುಂದುವರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.