ಮೈಸೂರು: ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಖಾಸಗಿ ಆಪ್ತ ಕಾರ್ಯದರ್ಶಿ ಕೋಟಿ ಕೋಟಿ ಲೂಟಿ ಮಾಡಿದ ಆರೋಪದ ಸುದ್ದಿ ಸದ್ದು ಮಾಡ್ತಿದೆ. ಈ ಮಧ್ಯೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರ ಪುತ್ರ ವಿಜಯ್ ನಿರಾಣಿ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ.
ಭ್ರಷ್ಟಾಚಾರ ಆರೋಪ: ಸಚಿವ ಮುರುಗೇಶ್ ನಿರಾಣಿ ಪುತ್ರನ ವಿರುದ್ಧ ಎಸಿಬಿಗೆ ದೂರು - complaint against minister nirani son in Mysore ,
ಭ್ರಷ್ಟಾಚಾರ ಆರೋಪದಡಿ ಸಚಿವ ಮುರುಗೇಶ್ ನಿರಾಣಿ ಪುತ್ರ ವಿಜಯ್ ನಿರಾಣಿ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ.
ನಿರಾಣಿ ಪುತ್ರನ ವಿರುದ್ಧ ಎಸಿಬಿಗೆ ದೂರು
ನಿರಾಣಿ ಶುಗರ್ಸ್ ಫ್ಯಾಕ್ಟರಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿಜಯ್ ನಿರಾಣಿ, ಪಾಂಡವಪುರ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಕಾಂಟ್ರ್ಯಾಕ್ಟ್ ಅಗ್ರಿಮೆಂಟ್ ನೋಂದಣಿ ಆಗಿಲ್ಲ. ಜತೆಗೆ ಸರ್ಕಾರಕ್ಕೆ 20 ಕೋಟಿ ರೂ. ಠೇವಣಿ ಪಾವತಿಸದ ಆರೋಪದಡಿ ಮೈಸೂರು ಎಸಿಬಿ ಎಸ್ ಪಿಗೆ ಪಾಂಡವಪುರ ತಾಲೂಕಿನ ಕಾಂಗ್ರೆಸ್ ಮುಖಂಡ ಡಾ. ರವೀಂದ್ರ ದೂರು ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಭೀಕರ ಅಪಘಾತ: ಖಳನಟ ಸೂರ್ಯೋದಯ ಪುತ್ರ ವಿಧಿವಶ
Last Updated : Jul 3, 2021, 1:29 PM IST