ಕರ್ನಾಟಕ

karnataka

ETV Bharat / state

ಮಾಲ್ಗುಡಿ ಡೇಸ್‌ ರೈಲ್ವೆ ನಿಲ್ದಾಣದಲ್ಲಿ ನಿಲ್ಲಲ್ಲಿದ್ದಾನೆ ಆರ್.ಕೆ.ಲಕ್ಷ್ಮಣ್ ರ 'ಕಾಮನ್ ಮ್ಯಾನ್‌'! - common man in railway station

ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ 'ಸಾಮಾನ್ಯ ಮನುಷ್ಯ' ಇನ್ಮುಂದೆ ಶಿವಮೊಗ್ಗ ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲಲ್ಲಿದ್ದಾನೆ. ಇದಕ್ಕಾಗಿ ನೈರುತ್ಯ ರೈಲ್ವೆಯ ಸೂಚನೆಯಂತೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು , 5 ಅಡಿ ಎತ್ತರದಲ್ಲಿ 'ಕಾಮನ್ ಮ್ಯಾನ್' ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದಾರೆ.

common man cartoon in malgudi days railway station
ಕಾಮನ್ ಮ್ಯಾನ್‌

By

Published : Sep 17, 2020, 12:28 AM IST

ಮೈಸೂರು: 'ಕಾಮನ್ ಮ್ಯಾನ್' ಕಾರ್ಟೂನ್ ಮೂಲಕ ದೇಶದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ 'ಸಾಮಾನ್ಯ ಮನುಷ್ಯ' ಇನ್ಮುಂದೆ ಶಿವಮೊಗ್ಗ ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲಲ್ಲಿದ್ದಾನೆ.

ಕಾಮನ್ ಮ್ಯಾನ್‌
ಮೈಸೂರು ಮೂಲದವರಾದ ಆರ್.ಕೆ.ಲಕ್ಷ್ಮಣ್ ಅವರು ಖಾಸಗಿ ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾಗ, 'ಕಾಮನ್ ಮ್ಯಾನ್' ಕಾರ್ಟೂನ್ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ಹೇಳುತ್ತಿದ್ದರು. ಅವರ ಈ ವ್ಯಂಗ್ಯಚಿತ್ರ ತುಂಬಾ ಜನಜನಿತವಾಯಿತು.ಇಂತಹ 'ಕಾಮನ್ ಮ್ಯಾನ್ ' ಶಾಶ್ವತವಾಗಿ ನಿಲ್ಲಬೇಕು ಎನ್ನುವ ಉದ್ದೇಶದಿಂದ ನೈರುತ್ಯ ರೈಲ್ವೆ ಇಲಾಖೆ ಹೊಸ ಪ್ಲಾನ್ ಮಾಡಿಕೊಂಡಿದೆ.

ನೈರುತ್ಯ ರೈಲ್ವೆಯ ಸೂಚನೆಯಂತೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು , 5 ಅಡಿ ಎತ್ತರದಲ್ಲಿ 'ಕಾಮನ್ ಮ್ಯಾನ್' ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ಈ ಕಾರ್ಯದಲ್ಲಿ ಮಗ್ನರಾಗಿರುವ ಇವರು ಅಂತಿಮ ರೂಪರೇಷೆ ನೀಡಲು ಸಜ್ಜಾಗಿದ್ದಾರೆ. 'ಮಾಲ್ಗುಡಿ ಡೇಸ್' ನ ಸ್ವಾಮಿ ಅಂಡ್ ಫ್ರೆಂಡ್ಸ್​ ಹಾಗೂ ಆರ್.ಕೆ.ಲಕ್ಷ್ಮಣ್ ಅವರ 'ಕಾಮನ್ ಮ್ಯಾನ್' ಪ್ರತಿಮೆ ರೆಡಿ ಮಾಡುತ್ತಿದ್ದಾರೆ.

ಆರ್.ಕೆ.ಲಕ್ಷ್ಮಣ್ ಅವರ 'ಕಾಮನ್ ಮ್ಯಾನ್' ಕಾರ್ಟೂನ್ ಪುಸ್ತಕವನ್ನು ಪ್ರಧಾನಿ ಮೋದಿ ಅವರು ಬಿಡುಗಡೆಗೊಳಿಸಿದ್ದರು. ಅಷ್ಟರ ಮಟ್ಟಿಗೆ ಈ ಕಾರ್ಟೂನ್ ಜನಸಾಮಾನ್ಯರ ಭಾವನೆಗಳನ್ನು ಬೆಸೆದಿದೆ. ಶಿವಮೊಗ್ಗದ ಅಸರಾಳು ರೈಲ್ವೆ ನಿಲ್ದಾಣದಲ್ಲಿ 'ಕಾಮನ್ ಮ್ಯಾನ್' ನಿಂತರೆ ಆರ್.ಕೆ.ಲಕ್ಷ್ಮಣ್ ಅವರ ಹೆಸರು ಜನಸಾಮಾನ್ಯರ ಮನಸ್ಸಿನಲ್ಲಿ ಸದಾ ಉಳಿಯಲಿದೆ.

ABOUT THE AUTHOR

...view details