ಕರ್ನಾಟಕ

karnataka

ಮೈಸೂರು ಮೃಗಾಲಯದಲ್ಲಿ ಪ್ರಾಣಿ-ಪಕ್ಷಿ ದತ್ತು ಸ್ವೀಕರಿಸಿದ ಹಾಸ್ಯನಟ ಚಿಕ್ಕಣ್ಣ

By

Published : Mar 17, 2019, 11:35 AM IST

ಮೈಸೂರು ಮೃಗಾಲಯದಲ್ಲಿ ಪ್ರಾಣಿ-ಪಕ್ಷಿಗಳನ್ನು ಕನ್ನಡದ ಹಾಸ್ಯ ನಟ ಚಿಕ್ಕಣ್ಣ ಹಾಗೂ ಸ್ನೇಹಿತರು ದತ್ತು ಸ್ವೀಕರಿಸಿದ್ದಾರೆ.

ಚಿಕ್ಕಣ್ಣ

ಮೈಸೂರು: ಹಾಸ್ಯನಟ ಚಿಕ್ಕಣ್ಣ ಹಾಗೂ ಸ್ನೇಹಿತರು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿಗಳನ್ನು ದತ್ತು ಸ್ವೀಕಾರ ಮಾಡಿದರು.

2019 ಮಾ.16 ರಿಂದ 2020 ಮಾ.16 ರ ವರೆಗೆ ಒಂದು ವರ್ಷದ ಅವಧಿಗೆ ದತ್ತು ಸ್ವೀಕಾರ ಮಾಡಲಾಗಿದೆ. ಚಿಕ್ಕಣ್ಣ ಚಿರತೆ 35,000 ರೂ.,ಸಿದ್ದೇಗೌಡ ಕಾಳಿಂಗ ಸರ್ಪ 3,500 ರೂ.,ಎಂ.ಮೋಹನ್‌ಕುಮಾರ್ 5 ಬಿಳಿ ನವಿಲುಗಳು 17,500 ರೂ.,ಡೆನ್ ತಿಮ್ಮಯ್ಯ 4 ನವಿಲುಗಳು 14,000 ರೂ., ಯಶಸ್ ಸೂರ್ಯ ಕಾಳಿಂಗ ಸರ್ಪ ಮತ್ತು ಹಸಿರು ಆನಕೊಂಡ ಹಾವು 13,500 ರೂ.,ಬಿ.ಎಸ್.ಲೋಕೇಶ್ ಕಾಳಿಂಗಸರ್ಪ 3,500 ರೂ. ಸೇರಿದಂತೆ ಒಟ್ಟು 87 ಸಾವಿರ ರೂ. ಪಾವತಿಸಿ ಪ್ರಾಣಿ-ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ.

ಮೈಸೂರು ಮೃಗಾಲಯದ ಮುಖ್ಯ ಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಒಂದು ಮಹತ್ಕಾರ್ಯದಲ್ಲಿ ಕೈ ಜೋಡಿಸುವ ಮೂಲಕ ಉನ್ನತ ಮಟ್ಟದ ಕೊಡುಗೆಯನ್ನು ನೀಡಿರುವ ಚಿಕ್ಕಣ್ಣ ಹಾಗೂ ಸ್ನೇಹಿತರಿಗೆ ಮೃಗಾಲಯವು ಧನ್ಯವಾದ ತಿಳಿಸಿದೆ. ಪ್ರಾಣಿ ಸಂರಕ್ಷಣೆಯ ಸತ್ಕಾರ್ಯಕ್ಕೆ ಅವರು ನೀಡಿರುವ ಮಹತ್ತರ ಬೆಂಬಲ ಇದಾಗಿದೆ ಎಂದು ಮೃಗಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

For All Latest Updates

TAGGED:

ABOUT THE AUTHOR

...view details