ಮೈಸೂರು: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಯಶೋಧರಪುರ ಗ್ರಾಮದಲ್ಲಿ ನಡೆದಿದೆ.
ಬಸ್-ಬೈಕ್ ನಡುವೆ ಡಿಕ್ಕಿ,ಇಬ್ಬರು ಸವಾರರು ಸಾವು - Mysore news
ಬಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ನಗರದಲ್ಲಿ ನಡೆದಿದೆ.
![ಬಸ್-ಬೈಕ್ ನಡುವೆ ಡಿಕ್ಕಿ,ಇಬ್ಬರು ಸವಾರರು ಸಾವು Collision between bus and bike, two riders killed](https://etvbharatimages.akamaized.net/etvbharat/prod-images/768-512-8781483-thumbnail-3x2-nin.jpg)
ಬಸ್-ಬೈಕ್ ನಡುವೆ ಡಿಕ್ಕಿ,ಇಬ್ಬರು ಸವಾರರು ಸಾವು
ಶಿವರಾಜ್ ಗೌಡ (30) ಹಾಗೂ ಕಾರ್ತಿಕ್ (20) ಅಪಘಾತದಿಂದ ಮೃತಪಟ್ಟವರು. ಹುಣಸೂರಿನಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಈ ಸಂಬಂಧ ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.