ಕರ್ನಾಟಕ

karnataka

ETV Bharat / state

ಕಬ್ಬಿನ ಲಾರಿ - ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ - ಮೈಸೂರಿನಲ್ಲಿ ಲಾರಿ ಬೈಕ್ ನಡುವೆ ಅಪಘಾತ

ಕಬ್ಬಿನ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.

ಕಬ್ಬಿನ ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ Collide between sugarcane lorry-bike in Mysore
ಕಬ್ಬಿನ ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ

By

Published : Mar 4, 2020, 8:56 AM IST

ಮೈಸೂರು: ಕಬ್ಬಿನ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.

ಇಬ್ಬರಿಗೆ ಗಂಭೀರ ಗಾಯ

ಮಂಡ್ಯ ಜಿಲ್ಲೆಯ ಕುಮ್ಮಡಹಳ್ಳಿ ಗ್ರಾಮದ ನಿವಾಸಿ ಗೌತಮ್ ಹಾಗೂ ಹಿರೇಗೌಡರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಬ್ಬಿನ ಲಾರಿ - ಬೈಕ್ ನಡುವೆ ಮುಖಾಮುಖಿ ಡಿಕ್ಕಿ

ತಿ.ನರಸೀಪುರ ತಾಲೂಕಿನಲ್ಲಿ ಸೋಸಲೆ ಗ್ರಾಮದ ಬಳಿ ಎದುರುಗಡೆ ಬರುತ್ತಿದ್ದ ಕಬ್ಬಿನ ಲಾರಿಗೆ ಗೌತಮ್ ಅವರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಕ್ರಕ್ಕೆ ಬೈಕ್ ಸವಾರರಿಬ್ಬರು ಸಿಲುಕಿಕೊಂಡಿದ್ದರು. ಕೂಡಲೇ ಸಾರ್ವಜನಿಕರು ಇಬ್ಬರನ್ನು ಚಕ್ರದಿಂದ ಹೊರತೆಗೆದು ಮನೆಯವರ ವಿಳಾಸ ಪಡೆದು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details