ಕರ್ನಾಟಕ

karnataka

ETV Bharat / state

ಪ್ರತಾಪ ಸಿಂಹ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ : ಚುನಾವಣಾಧಿಕಾರಿಗೆ ಕಾಂಗ್ರೆಸ್‌ ಕಂಪ್ಲೇಂಟ್‌ - Congress

ಸಿದ್ಧಲಿಂಗಪುರದ ಮುಜರಾಯಿ ಇಲಾಖೆಗೆ ಸೇರಿದ ಚಂದ್ರಮೌಳೇಶ್ವರ ದೇವಸ್ಥಾನದ ಶಿವಲಿಂಗದ ಮೇಲಿನ ನಾಗರ ಹೆಡೆಯ ಮೇಲೆ ಪ್ರತಾಪ್ ಸಿಂಹ ಪ್ರಚಾರಕ್ಕೂ ಮುನ್ನ ದೇವಾಲಯದಲ್ಲಿ ಬಿಜೆಪಿ ಬಾವುಟ ಇಟ್ಟು ಪೂಜೆ ಸಲ್ಲಿಸಿದ್ದರು. ನಂತರ ಅದನ್ನು ತಮ್ಮ ಕೊರಳಿಗೆ ಹಾಕಿಕೊಂಡು ಪ್ರಚಾರ ಪ್ರಾರಂಭಿಸಿದ್ದರು ಎನ್ನಲಾಗ್ತಿದೆ.

ಪ್ರತಾಪ್ ಸಿಂಹ

By

Published : Mar 29, 2019, 8:45 AM IST

ಮೈಸೂರು:ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ವಿಗ್ರಹದ ಮೇಲೆ ಬಿಜೆಪಿ ಬಾವುಟ ಇಟ್ಟು ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾಧಿಕಾರಿಗೆ ದೂರು ನೀಡಿದೆ.

ಸಿದ್ಧಲಿಂಗಪುರದ ಮುಜರಾಯಿ ಇಲಾಖೆಗೆ ಸೇರಿದ ಚಂದ್ರಮೌಳೇಶ್ವರ ದೇವಸ್ಥಾನದ ಶಿವಲಿಂಗದ ಮೇಲಿನ ನಾಗರ ಹೆಡೆಯ ಮೇಲೆ ಪ್ರತಾಪ್ ಸಿಂಹ ಪ್ರಚಾರಕ್ಕೂ ಮುನ್ನ ದೇವಾಲಯದಲ್ಲಿ ಬಿಜೆಪಿ ಬಾವುಟ ಇಟ್ಟು ಪೂಜೆ ಸಲ್ಲಿಸಿದ್ದರು. ನಂತರ ಅದನ್ನು ತಮ್ಮ ಕೊರಳಿಗೆ ಹಾಕಿಕೊಂಡು ಪ್ರಚಾರ ಪ್ರಾರಂಭಿಸಿದ್ದರು ಎನ್ನಲಾಗ್ತಿದೆ.

ಪ್ರತಾಪ್ ಸಿಂಹ

ಈ ಸಂದರ್ಭದಲ್ಲಿ ಮುಜರಾಯಿಗೆ ಸೇರಿದ ದೇವಾಲಯದಲ್ಲಿ ಬಿಜೆಪಿ ಬಾವುಟಕ್ಕೆ ಪೂಜೆ ಸಲ್ಲಿಸಿರುವುದು ನೀತಿ ಸಂಹಿತೆ ಉಲ್ಲಂಘನೆ ಎಂದು ಕಾಂಗ್ರೆಸ್ ಮೈಸೂರು ಗ್ರಾಮಾಂತರ ಘಟಕವು ಜಿಲ್ಲಾಧಿಕಾರಿಗೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ದೂರು ನೀಡಿದೆ.

ABOUT THE AUTHOR

...view details