ಮೈಸೂರು:ಆಟೋದ ಚಕ್ರದ ಸಮೀಪ ನುಸುಳಿಕೊಂಡಿದ್ದ ನಾಗರಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.
ಆಟೋ ಚಕ್ರದ ಪಕ್ಕ ನುಸುಳಿಕೊಂಡು ಕೂತಿದ್ದ ನಾಗರಹಾವು.. ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್‌ಶ್ಯಾಮ್! - ಮೈಸೂರು
ಗಾಯತ್ರಿಪುರಂನಲ್ಲಿರುವ ನಗರ ಪೊಲೀಸ್ ಆಯುಕ್ತರ ನಿವಾಸದ ಹಿಂಭಾಗದ ರಸ್ತೆಯಲ್ಲಿರುವ ಆಟೋ ನಿಲ್ದಾಣದಲ್ಲಿ ಚಾಲಕನೊಬ್ಬ ಆಟೋ ನಿಲ್ಲಿಸಿ ಬಹಿರ್ದೆಸೆಗೆ ಹೋದ ಸಂದರ್ಭ ಆಟೋದ ಅಡಿಯೊಳಗೆ ನುಸುಳಿಕೊಂಡಿದ್ದ ನಾಗರಹಾವು.
ನಾಗರಹಾವು ರಕ್ಷಣೆ
ಗಾಯತ್ರಿಪುರಂನಲ್ಲಿರುವ ನಗರ ಪೊಲೀಸ್ ಆಯುಕ್ತರ ನಿವಾಸದ ಹಿಂಭಾಗದ ರಸ್ತೆಯಲ್ಲಿರುವ ಆಟೋ ನಿಲ್ದಾಣದಲ್ಲಿ ಚಾಲಕನೊಬ್ಬ ಆಟೋ ನಿಲ್ಲಿಸಿ ಬಹಿರ್ದೆಸೆಗೆ ಹೋದ ಸಂದರ್ಭ ಆಟೋದೊಳಗೆ ನುಸುಳಿತ್ತು.
ನಂತರ ವಾಪಸ್ ಬಂದ ಚಾಲಕ ಆಟೋ ಒಳಗೆ ಕುಳಿತಾಗ ಸೀಟಿನ ಹಿಂಭಾಗ ಬುಸುಗುಟ್ಟಿದ ಶಬ್ಧ ಬಂದಿದೆ. ಚಾಲಕ ಕೆಳಗಿಳಿದು ನೋಡಿದಾಗ ಚಕ್ರದ ಸಮೀಪ ಹಾವು ನುಸುಳಿಕೊಂಡು ಒಳಗೆ ಹೋಗುತ್ತಿರುವುದನ್ನು ನೋಡಿ ಕೂಡಲೇ ಸ್ನೇಕ್ ಶ್ಯಾಮ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸ್ನೇಕ್ ಶ್ಯಾಮ್ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.