ಮೈಸೂರು:ಇಲ್ಲಿನ ನಿವಾಸಿ ಬಿಎಂಶ್ರೀ ಶಶಿ ಎಂಬುವರ ಮನೆಯ ಅಡುಗೆ ಮನೆಯಲ್ಲಿ ಸುಮಾರು 3 ಅಡಿ ಉದ್ದದ ನಾಗರ ಹಾವು ಗ್ಯಾಸ್ ಸ್ಟವ್ ಕೆಳಗೆ ಮಲಗಿತ್ತು. ಅಡುಗೆ ಮನೆಯಲ್ಲಿ ಏನೋ ಬಿದ್ದಂತೆ ಶಬ್ದವಾಗಿದೆ ಎಂದು ಮಹಿಳೆ ಬಂದು ನೋಡಿದಾಗ, ಸ್ಟವ್ ಕೆಳಗೆ ನಾಗರ ಹಾವು ಮಲಗಿರುವುದನ್ನು ಗಮನಿಸಿದ್ದಾರೆ.
ಅಡುಗೆ ಮನೆ ಗ್ಯಾಸ್ ಸ್ಟವ್ ಕೆಳಗೆ ಬೆಚ್ಚಗೆ ಮಲಗಿದ್ದ ನಾಗರಹಾವು! - ಮೈಸೂರು
ಅಡುಗೆ ಮನೆಯ ಗ್ಯಾಸ್ ಸ್ಟವ್ ಕೆಳಗೆ ಮಲಗಿದ್ದ ನಾಗರ ಹಾವೊಂದು ಮಧ್ಯರಾತ್ರಿ ಮನೆ ಮಂದಿಯ ನಿದ್ದೆಗೆಡಿಸಿದೆ.
![ಅಡುಗೆ ಮನೆ ಗ್ಯಾಸ್ ಸ್ಟವ್ ಕೆಳಗೆ ಬೆಚ್ಚಗೆ ಮಲಗಿದ್ದ ನಾಗರಹಾವು! cobra found inside of house](https://etvbharatimages.akamaized.net/etvbharat/prod-images/768-512-12009212-thumbnail-3x2-net.jpg)
ಗ್ಯಾಸ್ ಸ್ಟವ್ ಕೆಳಗೆ ನಾಗರ ಹಾವು ಪ್ರತ್ಯಕ್ಷ
ಗ್ಯಾಸ್ ಸ್ಟವ್ ಕೆಳಗೆ ನಾಗರ ಹಾವು
ಕೂಡಲೇ ಮನೆಯವರು ಉರಗ ತಜ್ಞ ಸ್ನೇಕ್ ಸೂರ್ಯಕೀರ್ತಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಬಂದು ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು.
ಇದನ್ನೂ ಓದಿ:ಗಂಡನ ಮನೆಯವರ ಹಣದ ದಾಹಕ್ಕೆ ಸರ್ಕಾರಿ ಆಸ್ಪತ್ರೆ ಸ್ಟಾಫ್ ನರ್ಸ್ ಬಲಿ!