ಕರ್ನಾಟಕ

karnataka

ETV Bharat / state

ರಾಜಮಾತೆ ಪ್ರಮೋದಾ ದೇವಿ ಭೇಟಿ ಮಾಡಿದ ಸಿಎಂ ಯಡಿಯೂರಪ್ಪ - darasa recent news

ದಸರಾ ಮಹೋತ್ಸವದಲ್ಲಿ ರಾಜಮನೆತನದ ಕೊಡುಗೆ ಅಪಾರವಾದದ್ದು, ರಾಜಮಾತೆ ಪ್ರಮೋದಾ ದೇವಿ ಅವರ ಜೊತೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದೇನೆ. ಜಂಬೂಸವಾರಿ ದಿವಸ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಯದುವೀರ್ ಒಡೆಯರ್ ಅವರನ್ನು‌ ಕಳುಹಿಸಬೇಕು ಎಂದು ವಿನಂತಿಸಿರುವುದಾಗಿ ಬಿಎಸ್​ ಯಡಿಯೂರಪ್ಪ ತಿಳಿಸಿದರು.

ರಾಜಮಾತೆ ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ

By

Published : Sep 29, 2019, 7:16 PM IST

ಮೈಸೂರು: ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ರಾಜಮಾತೆ ಪ್ರಮೋದಾದೇವಿ‌ ಒಡೆಯರ್ ಅವರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಔಪಾಚಾರಿಕವಾಗಿ ಇಂದು ಅರಮನೆಯಲ್ಲಿ ಭೇಟಿ ಮಾಡಿದರು.

ಭೇಟಿ ಬಳಿಕ ಮಾತನಾಡಿದ ಅವರು, ದಸರಾ ಮಹೋತ್ಸವದಲ್ಲಿ ರಾಜಮನೆತನದ ಕೊಡುಗೆ ಅಪಾರವಾದದ್ದು. ರಾಜಮಾತೆ ಪ್ರಮೋದಾ ದೇವಿ ಅವರ ಜೊತೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದೇನೆ. ಜಂಬೂಸವಾರಿ ದಿವಸ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಯದುವೀರ್ ಒಡೆಯರ್ ಅವರನ್ನು‌ ಕಳುಹಿಸಬೇಕು ಎಂದು ರಾಜಮಾತೆಯವರಲ್ಲಿ‌ ತಿಳಿಸಿರುವುದಾಗಿ ಹೇಳಿದರು.

ರಾಜಮಾತೆ ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ

ಈ ಬಾರಿ ದಸರಾ ಮಹೋತ್ಸವ ತುಂಬಾ ಉತ್ತಮ ರೀತಿಯಲ್ಲಿ ಮೂಡಿಬಂದಿದ್ದು, ಫಲಪುಷ್ಪ ಪ್ರದರ್ಶನ ಹಾಗೂ ದೀಪಾಲಂಕಾರ ಪ್ರವಾಸಿಗರನ್ನು ಆಕರ್ಷಿಸುವಲ್ಲಿ‌ ಯಶಸ್ವಿಯಾಗುತ್ತವೆ. ಅದೇ ರೀತಿ ‌ಇಲ್ಲಿನ ಸಚಿವರು, ಶಾಸಕರು ಅಧಿಕಾರಿಗಳ ಜೊತೆ ಉತ್ತಮ‌ ಬಾಂಧವ್ಯದಿಂದ ಕೆಲಸ ಮಾಡಿರುವುದು ಕಂಡು ಬರುತ್ತದೆ ಎಂದರು.

ABOUT THE AUTHOR

...view details