ಮೈಸೂರು: ಪ್ರವಾಹದ ಪರಿಸ್ಥಿತಿಯಿಂದ ಮುಂದೂಡಲ್ಪಟ್ಟಿದ್ದ ದಸರಾ ಉನ್ನತ ಮಟ್ಟದ ಸಭೆ ನಾಳೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಯಲಿದೆ.
ನಾಳೆ ಸಿಎಂ ನೇತೃತ್ವದಲ್ಲಿ ದಸರಾ ಆಚರಣೆ ಸಂಬಂಧ ಉನ್ನತ ಮಟ್ಟದ ಸಭೆ - Dasara meeting
ಇದೇ ತಿಂಗಳ 9ರಂದು ನಿಗದಿಯಾಗಿದ್ದ ದಸರಾ ಉನ್ನತ ಮಟ್ಟದ ಸಭೆ ರಾಜ್ಯದ ಹಲವೆಡೆ ಉಂಟಾದ ಪ್ರವಾಹದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಇದೇ ಸಭೆ ನಾಳೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ದಸರಾ ಉನ್ನತ ಮಟ್ಟದ ಸಭೆ
ಇದೇ ತಿಂಗಳ 9ರಂದು ನಿಗದಿಯಾಗಿದ್ದ ದಸರಾ ಉನ್ನತ ಮಟ್ಟದ ಸಭೆ ರಾಜ್ಯದ ಹಲವೆಡೆ ಉಂಟಾದ ಪ್ರವಾಹದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಇದೇ ಸಭೆ ನಾಳೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಈ ಸಭೆಗೆ ಮೈಸೂರು ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು, ಈ ಬಾರಿ ದಸರಾವನ್ನು ಯಾವ ರೀತಿ ಅದ್ದೂರಿಯಾಗಿ ಆಚರಿಸಬೇಕು, ಗಜಪಯಣವನ್ನು ಯಾವಾಗ ಮಾಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ನಾಳಿನ ಸಭೆಯಲ್ಲಿ ಚರ್ಚಿಸಲಿದ್ದಾರೆ.