ಮೈಸೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ದಿನ ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅ.4ರಂದು ಮಂಗಳವಾರ ಸಂಜೆ 5.35ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅ.5ರಂದು ಬೆಳಿಗ್ಗೆ 9ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಬೆಳಗ್ಗೆ 10.30ಕ್ಕೆ ರಾಮಕೃಷ್ಣನಗರದ ಐ ಬ್ಲಾಕ್‌ನಲ್ಲಿರುವ ಪ್ರಾದೇಶಿಕ ಪತ್ರಿಕೆಯ ನೂತನ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 2.36ರಿಂದ 2.50 ಕ್ಕೆ ಅರಮನೆಯ ಬಲದ್ವಾರದಲ್ಲಿರುವ ನಂದಿಧ್ವಜ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5.07ರಿಂದ 5.18ರವರೆಗೆ ಅರಮನೆ ಒಳಾಂಗಣದಲ್ಲಿ ವಿಜಯದಶಮಿ ಮೆರವಣಿಗೆ ಉದ್ಘಾಟನೆ ಮಾಡಲಿದ್ದಾರೆ.