ಕರ್ನಾಟಕ

karnataka

ETV Bharat / state

ಸೋಲಿನ ಭೀತಿಯಿಂದ ಪ್ರಿಯಾಂಕ್​ ಖರ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ : ಸಿಎಂ ಬೊಮ್ಮಾಯಿ - Chief Minister Basavaraja Bommai

ಮೈಸೂರಿನಲ್ಲಿ ಪ್ರಿಯಾಂಕಾ ಖರ್ಗೆ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

Chief Minister Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : May 1, 2023, 5:12 PM IST

ಸೋಲಿನ ಭೀತಿಯಿಂದ ಪ್ರಿಯಾಂಕ್​ ಖರ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ : ಸಿಎಂ ಬೊಮ್ಮಾಯಿ

ಮೈಸೂರು :ಪ್ರಿಯಾಂಕ್​ ಖರ್ಗೆಯಿಂದ ಏನನ್ನು ಅಪೇಕ್ಷೆ ಮಾಡುತ್ತೀರಿ. ಅವರು ಸೋಲಿನ ಹತಾಶೆಯಲ್ಲಿ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಮೊನ್ನೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ಮಾತನಾಡಿ ಹೇಳಿಕೆಯನ್ನು ವಾಪಸ್ ತೆಗೆದುಕೊಂಡರು. ಈಗ ಇವರ ಸರದಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 'ನಾಲಾಯಕ್​ ಮಗ' ಎಂಬ ಆಕ್ಷೇಪಾರ್ಹ ಪದವನ್ನು ಪ್ರಿಯಾಂಕ್​ ಖರ್ಗೆ ಬಳಸಿರುವ, ಬಗ್ಗೆ ಇಂದು ಮಾಧ್ಯಮಗಳ ಪ್ರಶ್ನೆಗೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ವರುಣಾದಲ್ಲಿ ಈಗಾಗಲೇ ಕಾಂಗ್ರೆಸ್​ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿಯಿಂದ ಸಚಿವ ಸೋಮಣ್ಣ ನಡುವೆ ಅವರ ನೇರ ಪೈಪೋಟಿ ನಡೆಯುತ್ತಿದೆ. ಈ ಮಧ್ಯ ಪ್ರಚಾರ ಸಂದರ್ಭದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವರುಣಾದಲ್ಲಿ ಪ್ರತಿದಿನ ಗಲಾಟೆಗಳಾಗುತ್ತಿವೆ.

ಈ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಹತಾಶೆಯಿಂದ ಗಲಾಟೆ ಮಾಡಿದರೆ ವರುಣಾವನ್ನು ಗೆಲ್ಲಬಹುದು. ಗಲಾಟೆ ಮಾಡುವ ಮೂಲಕ ಮತದಾರರ ಮೇಲೆ ಭಯದ ವಾತಾವರಣ ನಿರ್ಮಿಸುವ ಉದ್ದೇಶ ಇದೆ. ಆದರೆ ವರುಣಾದ ಜನ ಜಾಗೃತರಾಗಿದ್ದು. ವರುಣಾದಲ್ಲಿ ಬಿಜೆಪಿಗೆ ಮಿಂಚಿಂಗ್ ಪವರ್ ಇದೆ.‌ ಮುಂದಿನ ದಿನಗಳಲ್ಲಿ ನಾನು ಸಹ ವರುಣಾಗೆ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ.‌ ಆದರೆ ನಾಳೆ ಅಮಿತ್ ಶಾ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ :ದೇಶಕ್ಕಾಗಿ ಗುಂಡು ತಿನ್ನಲು ಸಿದ್ಧರೆನ್ನುವ ನನ್ನ ಅಣ್ಣನಿಂದ ಕಲಿಯಬೇಕಿದೆ: 91 ಬಾರಿ ಬೈದಿದ್ದಾರೆಂದ ಮೋದಿಗೆ ಪ್ರಿಯಾಂಕಾ ಗಾಂಧಿ ಟಾಂಗ್

ಬಿಜೆಪಿ ಪರ ಜನರ ಒಲವು : ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನ ಸಿದ್ದರಾಮಯ್ಯ ಟೀಕೆ ಮಾಡಿದ್ದು, ಹಳೆಯ ರಿಪೋರ್ಟ್ ಕಾರ್ಡ್ ಅನ್ನೆ ಬಿಜೆಪಿಯವರು ಕೊಡಲಾಗಲಿಲ್ಲ. ಇನ್ನು ಈಗ ಏನನ್ನು ಕೊಡುತ್ತಾರೆ ಎಂಬ ಟ್ವೀಟ್ ಮಾಡಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಕಾಂಗ್ರೆಸ್ ನವರು ಅವರು ಹೇಳಿದ ಪ್ರಣಾಳಿಕೆಯಲ್ಲಿ ಶೇ 65 ರಷ್ಟನ್ನೇ ಜಾರಿ ಮಾಡಿಲ್ಲ. ಆದರೆ ನಮ್ಮ ಕಾಲದಲ್ಲಿ ಕೋವಿಡ್ ಹಾಗೂ ಮಳೆ ಹೆಚ್ಚಾಗಿ ಪ್ರವಾಹ ಉಂಟಾಗಿತ್ತು. ಇದರಿಂದ ಕೆಲವು ಯೋಜನೆಗಳನ್ನು ಮಾರ್ಪಾಡು ಮಾಡಿದ್ದೇವೆ ಎಂದು ವಿಧಾನಸೌಧದಲ್ಲೇ ಹೇಳಿಕೆ ನೀಡಿದ್ದೆ ಎಂದರು.

ಇನ್ನು ಉಚಿತ ಬಸ್ ಪಾಸ್ ಹಾಗೂ ಉಚಿತ ವಿದ್ಯುತ್ ಬಗ್ಗೆ ನಮ್ಮ ಘೋಷಣೆಗಳನ್ನೇ ಕಾಂಗ್ರೆಸ್​ನವರು ಕಾಪಿ ಮಾಡಿದ್ದಾರೆ. ಅವರಿಂದ ನಾವು ಪಾಠ ಕಲಿಯಬೇಕಿಲ್ಲ. ಕರ್ನಾಟಕದಲ್ಲಿ ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರು ರ‍್ಯಾಲಿ ಮಾಡಿದ ಮೇಲೆ ಬಿಜೆಪಿ ಪರ ಜನರ ಒಲವು ಹೆಚ್ಚಾಗಿದ್ದು, ಹೆಚ್ಚಿನ ಸ್ಥಾನವನ್ನು ಗೆಲ್ಲಲು ಸಹಾಯವಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ :ಏಕರೂಪದ ನಾಗರಿಕ ಸಂಹಿತೆ ಜಾರಿ, BPL ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ಹಾಲು, 3 ಗ್ಯಾಸ್ ಸಿಲಿಂಡರ್‌ ಫ್ರೀ!- ಬಿಜೆಪಿ ಪ್ರಣಾಳಿಕೆ

ABOUT THE AUTHOR

...view details