ಕರ್ನಾಟಕ

karnataka

ETV Bharat / state

ಬೆಂಗಳೂರು ಪೂರ್ತಿ ಮುಳುಗಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ - rainfall at Bengaluru

ಬೆಂಗಳೂರಿನ 9 ವಲಯಗಳಲ್ಲಿ ಕೇವಲ ಎರಡು ವಲಯದಲ್ಲಿ ಮಾತ್ರ ಮಳೆಯಿಂದ ತೊಂದರೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

By

Published : Sep 6, 2022, 6:19 PM IST

Updated : Sep 6, 2022, 7:01 PM IST

ಮೈಸೂರು: ಬೆಂಗಳೂರಿನ ಎರಡು ವಲಯಗಳಲ್ಲಿ ಮಾತ್ರ ಮಳೆಯಿಂದ ತೊಂದರೆಯಾಗಿದ್ದು, ಇಡೀ ಬೆಂಗಳೂರು ಮುಳುಗಿಲ್ಲ ಎಂದು ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಖಾರವಾಗಿಯೇ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು

ಇಂದು ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರಿನ 9 ವಲಯಗಳಲ್ಲಿ ಕೇವಲ ಎರಡು ವಲಯದಲ್ಲಿ ಮಾತ್ರ ಮಳೆಯಿಂದ ತೊಂದರೆಯಾಗಿವೆ. ಇಡೀ ಬೆಂಗಳೂರಿಗೆ ತೊಂದರೆಯಾಗಿದೆ ಎಂದು ಬಿಂಬಿಸಲಾಗುತ್ತಿದೆ. ಇದು ಸರಿಯಲ್ಲ. ಬೆಂಗಳೂರಿನಲ್ಲಿ ಇರುವ ಎಲ್ಲ ಕೆರೆಗಳು ತುಂಬಿದ್ದು, ಭೂಮಿಯಿಂದಲೇ ನೀರು ಉಕ್ಕಿ ಬರುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಕೆರೆಗಳ ಒತ್ತುವರಿ ರಾಜಕಾಲುವೆ ಒತ್ತುವರಿ ಕಾರಣವಾಗಿದ್ದು, ಒತ್ತುವರಿ ತೆರವು ಮಾಡಲು ಈಗಾಗಲೇ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ವಿರೋಧ ಪಕ್ಷಗಳು ಇಂತಹ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದರೆ ಇದು ಸರಿಯಲ್ಲ. ಈ ಸಂದರ್ಭದಲ್ಲಿ ಸಹಕಾರ ನೀಡಬೇಕು. ಅದು ಆಗುತ್ತಿಲ್ಲ. ಇದು ದುರ್ದೈವ ಎಂದ ಸಿಎಂ, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಒತ್ತುವರಿ, ರಾಜಕಾಲುವೆ ಮೇಲೆ ಮನೆ ನಿರ್ಮಾಣದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.

ಮಂಡ್ಯದಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಆಗುವ ಕೇಂದ್ರದಲ್ಲಿ ತುಂಬಿದ್ದ ನೀರು ನಾಳೆಯ ಒಳಗೆ ತೆರವುಗೊಳಿಸಲಾಗುವುದು. ನಾಳೆಯಿಂದ ಬೆಂಗಳೂರಿಗೆ ನೀರು ಸರಬರಾಜು ಆಗಲಿದೆ ಎಂದು ಹೇಳಿದರು.

ಮೇಯರ್​ಗೆ ಶುಭಾಶಯ ತಿಳಿಸಿದ ಸಿಎಂ:ಮೈಸೂರು ಮೇಯರ್ ಹಾಗೂ ಉಪ ಮೇಯರ್ ಎರಡು ಸ್ಥಾನಗಳನ್ನು ಬಿಜೆಪಿ ಗಳಿಸಿರುವುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು. ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಆಗಿರುವ ಹಿನ್ನಡೆಯನ್ನು ಗಮನಿಸಿರುವ ನಗರ ಪಾಲಿಕೆ ಸದಸ್ಯರು ಬಿಜೆಪಿ ಬೆಂಬಲಿಸಿದ್ದಾರೆ.

ಈ ಬಾರಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಮುಂದಾಗಿತ್ತು. ಸಂಖ್ಯಾ ಬಲದ ಆಧಾರದ ಮೇಲೆ ಸ್ಪರ್ಧೆ ಮಾಡಿದ್ದೆವು. ಇದರಿಂದ ಮೇಯರ್ ಸ್ಥಾನ ಲಭಿಸಿತು. ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್ ಯತ್ನಿಸಿತ್ತು. ಆದರೆ, ತಾಂತ್ರಿಕ ಕಾರಣಕ್ಕಾಗಿ, ಜೆಡಿಎಸ್​ಗೆ ಸೋಲಾಯಿತು. ಮುಂದೆ ಮೈಸೂರಿನ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.

ಓದಿ:ಜಲಾವೃತವಾದ ಲೇಔಟ್​ಗಳು.. ಮನೆ ಖಾಲಿ ಮಾಡಿ ಹೋಟೆಲ್,​ ಲಾಡ್ಜ್​ ಸೇರಿದ ಬೆಂಗಳೂರಿಗರು

Last Updated : Sep 6, 2022, 7:01 PM IST

ABOUT THE AUTHOR

...view details