ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕುಟುಂಬಸ್ಥರು ಡಬಲ್ ಡೆಕ್ಕರ್ ಬಸ್‌ನಲ್ಲಿ ಮೈಸೂರು ಸಿಟಿ ರೌಂಡ್ಸ್ ಹಾಕಿ ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಂಡರು.
ಮೈಸೂರು ದಸರಾ ದೀಪಾಲಂಕಾರ ಕಣ್ತುಂಬಿಕೊಂಡ ಸಿಎಂ ಫ್ಯಾಮಿಲಿ - mysure dasara lighting
ನಿನ್ನೆ ರಾತ್ರಿ ಮೈಸೂರು ದಸರಾ ವಿದ್ಯುತ್ ದೀಪಾಲಂಕಾರವನ್ನು ಕುಟುಂಬ ಸಮೇತರಾಗಿ ಸಿಎಂ ಬೊಮ್ಮಾಯಿ ವೀಕ್ಷಿಸಿದರು.
ಮೈಸೂರು ದಸರಾ ದೀಪಾಲಂಕಾರ
ಶುಕ್ರವಾರ ರಾತ್ರಿ 11 ಗಂಟೆಗೆ ಖಾಸಗಿ ಹೋಟೆಲ್ನಿಂದ ಹೊರಟ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕುಟುಂಬಸ್ಥರು, ಸಂಸದ ಪ್ರತಾಪ್ ಸಿಂಹ, ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ನಾಗೇಂದ್ರ ಸೇರಿದಂತೆ ರಾಜಕೀಯ ಗಣ್ಯರು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್‌ನಲ್ಲಿ ಸಂಚಾರ ಮಾಡಿ, ಕಂಗೊಳಿಸುತ್ತಿದ್ದ ವಿದ್ಯುತ್ ದೀಪಾಲಂಕಾರವನ್ನು ನೋಡಿದರು.
ಈ ಬಾರಿಯ ದೀಪಾಲಂಕಾರ ತುಂಬಾ ಚೆನ್ನಾಗಿದೆ. ಹೀಗಾಗಿ ಬೇರೆ ಬೇರೆ ಜಿಲ್ಲೆಗಳು, ಊರುಗಳಿಂದ ಜನರು ನೋಡಲು ಬರುತ್ತಿದ್ದಾರೆ ಎಂದರು.