ಮೈಸೂರು: ಕೊರೊನಾ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆ 29 ದಿನಗಳ ಕಾಲ ಶ್ರೀಕಂಠಶ್ವೆರ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಕೊರೊನಾ ಆರ್ಭಟ: ಇನ್ಮುಂದೆ ಭಕ್ತರಿಗಿಲ್ಲ ನಂಜುಡೇಶ್ವರನ ದರ್ಶನ ಭಾಗ್ಯ! - ನಂಜನಗೂಡಿನ ಶ್ರೀಕಂಠಶ್ವೇರ ದೇವಾಲಯ
ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ ಕೊರೊನಾದ ಎರಡನೇ ಅಲೆ ಹೆಚ್ಚಾಗಿರುವ ಹಿನ್ನೆಲೆ ಸೊಂಕು ಹರಡುವುದನ್ನು ತಪ್ಪಿಸಲು ಹಾಗೂ ನಿಯಂತ್ರಿಸಲು ದೇವಾಲಯಕ್ಕೆ ಬರುವ ಸಾರ್ವಜನಿಕರು ಹಾಗೂ ಭಕ್ತಾಧಿಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ಇನ್ಮುಂದೆ ಭಕ್ತರಿಗಿಲ್ಲ ನಂಜುಡೇಶ್ವರನ ದರ್ಶನ ಭಾಗ್ಯ
ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ನಂಜನಗೂಡಿನ ಶ್ರೀಕಂಠಶ್ವೇರ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ ಕೊರೊನಾದ ಎರಡನೇ ಅಲೆ ಹೆಚ್ಚಾಗಿರುವ ಹಿನ್ನೆಲೆ ಸೊಂಕು ಹರಡುವುದನ್ನು ತಪ್ಪಿಸಲು ಹಾಗೂ ನಿಯಂತ್ರಿಸಲು ದೇವಾಲಯಕ್ಕೆ ಬರುವ ಸಾರ್ವಜನಿಕರು ಹಾಗೂ ಭಕ್ತಾಧಿಗಳಿಗೆ ದಿನಾಂಕ 16 -4-2021 ರ ಏಪ್ರಿಲ್ ನಿಂದ 15-05-2021ರ ಮೇ ವರೆಗೆ 29 ದಿನಗಳ ಕಾಲ ದೇವಾಲಯದ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕೇಂದ್ರಿಯ ಪುರಾತತ್ವ ಇಲಾಖೆ ಆದೇಶ ಹೊರಡಿಸಿದೆ.