ಮೈಸೂರು:ಜಿಲ್ಲೆಯಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಕೂಟದಲ್ಲಿ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ನಡುವೆ ರಂಪಾಟ ನಡೆದಿದ್ದು, ಇದರಿಂದ ಕಾಲೇಜಿಗೆ 2 ದಿನ ರಜೆ ನೀಡಲಾಗಿದೆ.
ಅಧ್ಯಾಪಕರು-ವಿದ್ಯಾರ್ಥಿಗಳ ರಂಪಾಟ: ಕಾಲೇಜಿಗೆ 2 ದಿನ ರಜೆ - clash between lecturer and students in mysore
ಮೈಸೂರು ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಕೂಟದಲ್ಲಿ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ನಡುವೆ ರಂಪಾಟ ನಡೆದಿದ್ದು, ಇದರಿಂದ ಕಾಲೇಜಿಗೆ 2 ದಿನ ರಜೆ ನೀಡಲಾಗಿದೆ.
![ಅಧ್ಯಾಪಕರು-ವಿದ್ಯಾರ್ಥಿಗಳ ರಂಪಾಟ: ಕಾಲೇಜಿಗೆ 2 ದಿನ ರಜೆ clash-between-lecturer-and-students-in-mysore](https://etvbharatimages.akamaized.net/etvbharat/prod-images/768-512-6281692-thumbnail-3x2-sanju.jpg)
ಘಟನೆ ಹಿನ್ನೆಲೆ: ಕಾಲೇಜು ಕ್ರೀಡಾಕೂಟದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕ್ರೀಡಾಂಗಣದ ಪಕ್ಕದಲ್ಲಿ ಕುಣಿಯುತ್ತಾ ಇರುವುದನ್ನು ಕಂಡಿರುವ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕಿಯೊಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಕ್ರೀಡೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಪ್ರತಿಭಟನೆಗೆ ಕಾಲೇಜಿನ ಅಧ್ಯಾಪಕ ನಾಗೇಂದ್ರ ಪ್ರಸಾದ್ ಎಂಬುವವರು ಬೆಂಬಲ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ಅಧ್ಯಾಪಕಿ, ತನ್ನ ಗಂಡನಿಗೆ ವಿಚಾರ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಅವರ ಪತಿ ಅಧ್ಯಾಪಕ ನಾಗೇಂದ್ರ ಪ್ರಸಾದ್ಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಪರಿಣಾಮ ಮತ್ತಷ್ಟು ಕೋಪಗೊಂಡ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಗಲಾಟೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶ್ವಸಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಮತ್ತು ನಾಳೆ ಕಾಲೇಜಿಗೆ ರಜೆ ನೀಡಲಾಗಿದೆ.