ಮೈಸೂರು: ಸಿನಿಮಾ ರೀತಿಯಲ್ಲಿ ಮನೆಯೊಂದರಲ್ಲಿ ಚಿನ್ನ ಕಳ್ಳತನ ಮಾಡಿರುವ ಘಟನೆ ನಗರದ ಸರಸ್ವತಿಪುರಂನಲ್ಲಿ ನಡೆದಿದೆ.
ನಗರದ ಸರಸ್ವತಿಪುರಂನ 7ನೇ ಕ್ರಾಸ್ನ ಮನೆಯೊಂದರಲ್ಲಿ ಮಧ್ಯರಾತ್ರಿ ಕಳ್ಳರು ಬಾಗಿಲಿನ ಬೀಗ ಹೊಡೆಯದೆ, ಕಿಟಕಿ ಮುರಿಯದೇ ಬುದ್ದಿವಂತಿಕೆಯಿಂದ ಕಳ್ಳತನ ಮಾಡಿದ್ದಾರೆ.
ಬಾಗಿಲು, ಕಿಟಕಿ ಮುರಿಯದೆ ಸಿನಿಮಾ ರೀತಿಯಲ್ಲಿ ಚಿನ್ನ ಕದ್ದ ಕಳ್ಳರು - ಮೈಸೂರು ಸುದ್ದಿ
ಮೈಸೂರಿನ ಸರಸ್ವತಿಪುರಂನ 7ನೇ ಕ್ರಾಸ್ನ ಮನೆಯೊಂದರಲ್ಲಿ ಮಧ್ಯರಾತ್ರಿ ಕಳ್ಳರು ಬಾಗಿಲಿನ ಬೀಗ ಹೊಡೆಯದೆ, ಕಿಟಕಿ ಮುರಿಯದೇ ಬುದ್ದಿವಂತಿಕೆಯಿಂದ ಕಳ್ಳತನ ಮಾಡಿದ್ದಾರೆ.
![ಬಾಗಿಲು, ಕಿಟಕಿ ಮುರಿಯದೆ ಸಿನಿಮಾ ರೀತಿಯಲ್ಲಿ ಚಿನ್ನ ಕದ್ದ ಕಳ್ಳರು Cinema style theft in Mysore](https://etvbharatimages.akamaized.net/etvbharat/prod-images/768-512-8641124-579-8641124-1598963693235.jpg)
ಬಾಗಿಲು, ಕಿಟಕಿ ಮುರಿಯದೆ ಸಿನಿಮಾ ರೀತಿಯಲ್ಲಿ ಚಿನ್ನ ಕದ್ದ ಕಳ್ಳರು
ಕಳ್ಳರು ಮನೆಯ ಬೀರುವಿನಲ್ಲಿದ್ದ ಕೆಜಿ ಗಟ್ಟಲೆ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದ ಚಿನ್ನದ ಒಡವೆಗಳನ್ನು ಮನೆಗೆ ತಂದು ಇಟ್ಟಿದ್ದರು. ಇದನ್ನು ನೋಡಿರುವ ವ್ಯಕ್ತಿಗಳೇ ಕಳ್ಳತನ ಮಾಡಿದ್ದಾರೆ ಎಂದು ಪೋಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸರಸ್ವತಿಪುರಂ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ತನಿಖೆ ಕೈಗೊಂಡಿದ್ದಾರೆ.