ಕರ್ನಾಟಕ

karnataka

ETV Bharat / state

ಸಿಐಡಿ ಪಾರದರ್ಶಕವಾಗಿ ತನಿಖೆ ನಡೆಸಲಿ: ಸ್ಯಾಂಟ್ರೋ ರವಿ ವಿರುದ್ಧ ಎರಡನೇ ಪ್ರಕರಣ ದಾಖಲಿಸಿದ ಮಹಿಳೆ - ಮೈಸೂರಿನ ದೇವರಾಜ ಪೋಲಿಸ್ ಠಾಣೆ

ನಿನ್ನೆ ಮೈಸೂರಿನ ದೇವರಾಜ ಪೋಲಿಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಎರಡನೇ ಪ್ರಕರಣ ದಾಖಲಿಸಿರುವ ಎರಡನೇ ಪತ್ನಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

Santro ravi
ಸ್ಯಾಂಟ್ರೋ ರವಿ

By

Published : Jan 17, 2023, 6:36 PM IST

ಸಿಐಡಿ ಪಾರದರ್ಶಕವಾಗಿ ತನಿಖೆ ನಡೆಸಲಿ: ಸ್ಯಾಂಟ್ರೋ ರವಿ ವಿರುದ್ಧ ಎರಡನೇ ಪ್ರಕರಣ ದಾಖಲಿಸಿದ ಮಹಿಳೆ

ಮೈಸೂರು: ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದರಿಂದ ಸತ್ಯಾಂಶ ಹೊರಬರುತ್ತದೆ ಎಂಬ ನಂಬಿಕೆ ಇದೆ. ಆದರೆ ಸಿಐಡಿ ಪಾರದರ್ಶಕವಾಗಿ ತನಿಖೆ ಮಾಡಬೇಕು ಎಂಬುದು ನನ್ನ ಅಭಿಲಾಷೆ, ಸ್ಯಾಂಟ್ರೊ ರವಿಯ ವಿರುದ್ಧ ನಿನ್ನೆ ಎರಡನೇ ಪ್ರಕರಣ ದಾಖಲಿಸಿರುವ ದೂರುದಾರೆ, ಎರಡನೇ ಪತ್ನಿ ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಸ್ಯಾಂಟ್ರೊ ರವಿ ವಿರುದ್ಧ ಎರಡನೇ ಪ್ರಕರಣ ದಾಖಲಿಸಿರುವ ಸಂತ್ರಸ್ತೆ, ನನ್ನ ಚೆಕ್ ಬುಕ್ ಕಳ್ಳತನವಾಗಿದೆ. ಇದನ್ನು ಸ್ಯಾಂಟ್ರೊ ರವಿ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ತಿಳಿಸಿದ್ದರು. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದರಿಂದ ಸತ್ಯಾಸತ್ಯತೆ ಹೊರಬರುತ್ತದೆ ಎಂಬುದನ್ನು ನಂಬಿದ್ದೇನೆ ಎಂದಿದ್ದಾರೆ.

ವಿಗ್ ಇಲ್ಲದ ಸ್ಯಾಂಟ್ರೊ ರವಿಯನ್ನು ನೋಡಿರಲಿಲ್ಲ: ನಾನು ಮದುವೆಯಾಗಿ ಮೂರೂವರೆ ವರ್ಷ ಆತನ ಜೊತೆ ಇದ್ದೆ, ಆದರೆ ಆತ ಅಹಮದಾಬಾದ್​ನಲ್ಲಿ ಬಂಧನವಾದಾಗ ನನಗೆ ಗಾಬರಿ ಆಯಿತು. ಯಾವಾಗಲೂ ತಲೆಯಲ್ಲಿ ವಿಗ್ ಇರುತ್ತಿತ್ತು, ವಿಗ್ ಇಲ್ಲದೆ ಆತನನ್ನು ಒಂದು ದಿನವೂ ನೋಡಿರಲಿಲ್ಲ, ಯಾವಾಗಲೂ ಅಫಿಶಿಯಲ್ ಲುಕ್​ನಲ್ಲಿ ಇರುತ್ತಿದ್ದ. ಈ ರೀತಿ ವಿಗ್ ಇಲ್ಲದ ರೂಪವನ್ನೇ ಮೂರೂವರೆ ವರ್ಷದಿಂದ ನೋಡಿರಲಿಲ್ಲ. ಆತ ಏನು ಕೆಲಸ ಮಾಡುತ್ತಾನೆ ಎಂಬುದ್ದನ್ನೂ ನಮಗೆ ಹೇಳುತ್ತಿರಲಿಲ್ಲ, ಜೊತೆಗೆ ಏನನ್ನು ಕೇಳಬೇಡಿ ಎಂದು ಹೇಳುತ್ತಿದ್ದ, ಹಾಗಾಗಿ ನನಗೆ ಈ ವಿಚಾರಗಳು ಮತ್ತು ಆತನ ವ್ಯವಹಾರಗಳು ನನಗೆ ಗೊತ್ತಿರಲಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ನಾನು ಯಾವುದೇ ತಪ್ಪು ಮಾಡದೇ ಇದ್ದರೂ, ನನ್ನ ಮೇಲೆ ಬೆಂಗಳೂರಿನ ಕಾಟನ್ ಪೇಟೆಯಲ್ಲಿ ಸುಳ್ಳು ಕೇಸ್ ಹಾಕಿಸಿ, ನಾನು ಮತ್ತು ನನ್ನ ತಂಗಿ 23 ದಿನಗಳು ಜೈಲಿನಲ್ಲಿ ಇದ್ದೆವು. ಈ ಬಗ್ಗೆ ಸುಳ್ಳು ಕೇಸ್ ಹಾಕಿದ ಇನ್​ಸ್ಪೆಕ್ಟರ್ ಅಮಾನತು ಆಗಿದ್ದಾರೆ. ಇದು ಬೇಸರದ ವಿಚಾರ ಆದರೂ, ಪೊಲೀಸರ ಬಗ್ಗೆ ಜನರಿಗೆ ನಂಬಿಕೆ ಇರುತ್ತದೆ. ಆದರೆ ಒಳ್ಳೆಯವರ ನಡುವೆ ಇಂತಹವರು ಇರುತ್ತಾರೆ ಎಂದು ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ವಿರುದ್ಧ ಮೈಸೂರಿನ ದೇವರಾಜ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಬಗ್ಗೆ ಹಾಗೂ ಸಿಐಡಿ ತನಿಖೆ ಬಗ್ಗೆ ಸಂತ್ರಸ್ತೆ ವಿವರಿಸಿದರು.

ಸ್ಯಾಂಟ್ರೊ ರವಿ ಜನವರಿ 30 ರ ವರೆಗೆ ಸಿಐಡಿ ವಶಕ್ಕೆ: ಸ್ಯಾಂಟ್ರೊ ರವಿ ಪ್ರಕರಣವನ್ನು ನಿನ್ನೆ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ವಹಿಸಿದ್ದು, ನಿನ್ನೆಯೇ ಸಿಐಡಿ ತಂಡ ಮೈಸೂರಿಗೆ ಆಗಮಿಸಿ, ಮೈಸೂರಿನ ವಿಜಯನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಎಲ್ಲ ದಾಖಲಾತಿಗಳನ್ನು ಪಡೆದಿದೆ. ಇಂದು ಸ್ಯಾಂಟ್ರೊ ರವಿಯನ್ನು ತಮ್ಮ ವಶಕ್ಕೆ ಪಡೆದು, ವೈದ್ಯಕೀಯ ತಪಾಸಣೆ ನಡೆಸಿ, ನಂತರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಸ್ಯಾಂಟ್ರೊ ರವಿಯನ್ನು ಜನವರಿ 30ರ ವರೆಗೆ ತಮ್ಮ ವಶಕ್ಕೆ ಪಡೆದಿದೆ.

ಮೈಸೂರು ನಗರ ಪೊಲೀಸ್ ಕಮಿಷನರ್ ಹೇಳಿದ್ದೇನು: ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಆದೇಶ ಪಡೆದ ನಂತರ, ಇಂದು ಸಿಐಡಿ ಅಧಿಕಾರಿಗಳಿಗೆ ಎಲ್ಲಾ ದಾಖಲಾತಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ಬದಲಾದ್ದರಿಂದ, ನಾವು ಪ್ರಕರಣದಲ್ಲಿ ಇರುವುದಿಲ್ಲ. ಸ್ಥಳೀಯವಾಗಿ ಯಾವ ಸಹಕಾರ ಬೇಕಾದರೂ ನಾವು ನೀಡುತ್ತೇವೆ ಎಂದು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:ಪಾರದರ್ಶಕ ತನಿಖೆಗಾಗಿ ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ: ಆರಗ ಜ್ಞಾನೇಂದ್ರ

ABOUT THE AUTHOR

...view details