ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಪುರಾತನ ಮತ್ತು ಪಾರಂಪರಿಕ ಸೆಂಟ್ ಫಿಲೋಮಿನಾ ಚರ್ಚ್ನಲ್ಲಿ ಕ್ರಿಸ್‌ಮಸ್ ಸಂಭ್ರಮ ಮನೆ ಮಾಡಿದ್ದು, ವಿಶೇಷ ಪೂಜೆ ಮತ್ತು ಪ್ರಾರ್ಥನೆ ಮಾಡಲಾಯಿತು. ಮೈಸೂರಿನ ಹೆಸರಾಂತ ಸೆಂಟ್ ಫಿಲೋಮಿನಾ ಚರ್ಚ್ನಲ್ಲಿ ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಕ್ರಿಸ್‌ಮಸ್ ಸಂಭ್ರಮ ಪ್ರಾರಂಭವಾಯಿತು. ಶಾಂತಿದೂತ ಯೇಸುವಿಗೆ ವಿಶೇಷ ಪೂಜೆ, ಪ್ರಾರ್ಥನೆ ಜರುಗಿದ್ದು, ಜನರು ಕ್ರಿಸ್‌ಮಸ್ ಶುಭಾಶಯವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಕ್ಯಾಥೋಲಿಕ್ನ ಪ್ರಧಾನ ಚರ್ಚ್ ಆದ ಸೆಂಟ್ ಫಿಲೋಮಿನಾದಲ್ಲಿ ಮೈಸೂರಿನ ಧರ್ಮ ಕ್ಷೇತ್ರದ ಆಡಳಿತಾಧಿಕಾರಿ ಬರ್ನಾಡ್ ಮೋರಿಸ್ ನೇತೃತ್ವದಲ್ಲಿ ಪೂಜೆ ಪ್ರಾರಂಭಿಸಲಾಯಿತು. ಬಳಿಕ, ಕ್ರಿಸ್‌ಮಸ್ ಜಾಗರಣೆ, ಬಲಿ ಪೂಜೆ ಸಲ್ಲಿಕೆ, ರಾತ್ರಿ 12 ಗಂಟೆಗೆ ಬಾಲಯೇಸು ಮೆರವಣಿಗೆ ಮೂಲಕ ಗೋದಳಿಯಲ್ಲಿ ಪ್ರತಿಷ್ಠಾಪನೆ ಮಾಡಿ, ಯೇಸು ಕ್ರಿಸ್ತನ ಜನನದ ಬಗ್ಗೆ ವಿವರಿಸುವ ಬೊಂಬೆಗಳನ್ನು ಪ್ರದರ್ಶನ ಮಾಡಲಾಯಿತು. ನಂತರ ಕರೋಲ್ ಕ್ರೈಸ್ತ ಗೀತೆಯನ್ನು ಹಾಡುತ್ತ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಅಷ್ಟೇ ಅಲ್ಲದೆ, ಸೆಂಟ್ ಫಿಲೋಮಿನಾ ಚರ್ಚ್ಗೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಹೀಗಾಗಿ ನಗರದಲ್ಲೀಗ ಕ್ರಿಸ್ಮಸ್ನ ಆಚರಣೆ ಜೋರಾಗಿ ಸಾಗಿದೆ. ದೀಪಗಳ ಅಲಂಕಾರ ಕಣ್ತುಂಬಿಕೊಳ್ಳಲು ಜನ ಚರ್ಚೆಗಳತ್ತ ಧಾವಿಸುತ್ತಿದ್ದಾರೆ.
ಇದನ್ನೂ ಓದಿ :ದೇಶದೆಲ್ಲೆಡೆ ಯೇಸುಕ್ರಿಸ್ತನ ಆರಾಧನೆ : ಮಧ್ಯರಾತ್ರಿಯಿಂದಲೇ ಸಂಭ್ರಮ; ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ